ಕುರ್ನಾಡು: ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಷ್ಟ ಬಂಧ ಸಹಸ್ರಕುಂಭಾಭಿಷೇಕದ ಪ್ರಧಾನ ಕಾರ್ಯಕ್ರಮಗಳು ಸೋಮವಾರ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಶ್ರೀ ಕ್ಷೇತ್ರದಲ್ಲಿ ಬೆಳಗ್ಗಿನಿಂದ ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕಗಳು ವಿಜೃಂಭಣೆಯಿಂದ ಜರ ಗಿತು.
ಸಹಸ್ರಾರು ಮಂದಿ ಭಕ್ತರು, ದೇಗುಲದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಮುಖರು ಸಹಿತ ಮೊದ ಲಾ ದ ವರು ಉಪಸ್ಥಿತರಿದ್ದರು. ರಾತ್ರಿ 7ರಿಂದ ರಾತ್ರಿಪೂಜೆ, ಶ್ರೀಭೂತಬಲಿ, ನೃತ್ಯಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆಯ ಮೂಲಕ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ವಿದ್ಯುಕ್ತ ತೆರೆಕಂಡವು.