ಸಂಸ್ಕೃತಿ, ಪರಂಪ ರೆ ಉಳಿಸಿ, ಬೆಳೆಸುವ ಕಾರ್ಯವಾಗಬೇಕಿದೆ: ಡಾ| ಮೋಹನ ಆಳ್ವ
ಕುರ್ನಾಡು : ನಮ್ಮ ಸಂಸ್ಕೃತಿ, ಪರಂಪರೆ, ಧಾರ್ಮಿಕ ಚಿಂತನೆಗಳನ್ನು ಉಳಿಸಿ, ಬೆಳೆಸುವ ಕಾರ್ಯವಾಗ ಬೇ ಕಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು.
ಬಂಟ್ವಾಳ ತಾಲೂಕು ಅಮ್ಮೆಂಬಳದ ಕುರ್ನಾಡು ಶ್ರೀ ಸೋಮನಾಥೇಶ್ವರ ದೇವ ಸ್ಥಾನದ ಅಷ್ಟಬಂಧ ಸಹಸ್ರಕುಂಭಾಭಿಷೇಕ ಉತ್ಸವ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ನಾಡಿನಲ್ಲಿ ನಾಗರಿಕತೆಯೊಂದಿಗೇ ಶಾಸ್ತ್ರೀಯ, ಜನಪದ ಚಿಂತನೆಗಳು ಬೆಳೆದು ಬಂದಿವೆ. ಆದರೂ ಜಾಗತಿಕ ಚಿಂತನೆ ಎದುರು ಪರಂಪರೆಯ ಚಿಂತನೆ, ಭಾಷೆಯ ಚಿಂತನೆ ಮಾಯವಾಗುತ್ತ ಬರುತ್ತಿದೆ ಎಂದು ಅವರು ವಿಶ್ಲೇಷಿಸಿದರು. ದೇಗುಲದಲ್ಲಿ ಸಮಾನತೆ ಮಂಗಳೂರು ಆಕಾಶವಾಣಿ ಕಾರ್ಯ ಕ್ರಮ ನಿರ್ವಾಹಕ ಡಾ| ಸದಾನಂದ ಪೆರ್ಲ ಮಾತನಾಡಿ, ಎಲ್ಲರೂ ದೇವರ ಮಕ್ಕಳು ಎಂದು ಸಾರುವ ಸಂದರ್ಭ ಬ್ರಹ್ಮಕಲಶೋತ್ಸವ. ದೇವಸ್ಥಾನ, ಭಜನ ಮಂದಿರಗಳಿಗೆ ಹೋದಾಗ ಸಿಗುವ ಸಮಾನತೆ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಇರಾ ಶ್ರೀ ಸೋಮನಾಥೇಶ್ವರ ದೇವ ಸ್ಥಾನದ ಆಡಳಿತ ಮೊಕ್ತೇಸರ ದೇವಿಪ್ರಸಾದ್ ಶೆಟ್ಟಿ ಕಲ್ಲಾಡಿ ಉದ್ಘಾಟಿಸಿದರು. ವಿದ್ವಾಂಸ ಕದ್ರಿ ನವನೀತ ಶೆಟ್ಟಿ ಮಾತ ನಾಡಿದರು.
ಗಂಜಿಮಠ ರಾಜ್ ಅಕಾಡೆಮಿಯ ಯತಿರಾಜ್ ಶೆಟ್ಟಿ, ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕÒ ರವೀಂದ್ರ ನಾಥ ರೈ, ಉದ್ಯಮಿ ರಂಗನಾಥ ಪೂಂಜ, ಅಜೆಕಳಗುತ್ತು, ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಆಡಳಿತ ಮೊಕ್ತೇಸರ ಡಾ| ಎಚ್. ಬಾಲಕೃಷ್ಣ ನಾಯ್ಕ ಕುರ್ನಾಡು ಗುತ್ತು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವೆಂಕಪ್ಪ ಕಾಜವ ಮಿತ್ತಕೋಡಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವಶಂಕರ ಭಟ್ ಕಾಡಿಮಾರು, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಗಣೇಶ ನಾಯ್ಕ ಕುರ್ನಾಡುಗುತ್ತು, ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ, ಗುಣಕರ ಆಳ್ವ, ಸುದರ್ಶನ ಶೆಟ್ಟಿ, ರಾಜೇಶ್ ಶೆಟ್ಟಿ ಪಜೀರುಗುತ್ತು ಹಾಜರಿದ್ದರು. ಟಿ.ಜಿ. ರಾಜಾರಾಮ ಭಟ್ ಸ್ವಾಗತಿಸಿದರು. ರಾಜೇಶ್ ಶೆಟ್ಟಿ ಪಜೀರುಗುತ್ತು ಪ್ರಾಸ್ತಾವಿಸಿದರು. ಸುಕೇಶ್ ಚೌಟ ಉಳ್ಳಾಲಗುತ್ತು ನಿರೂಪಿಸಿದರು. ರಾಜೀವ ಸಾಲ್ಯಾನ್ ವಂದಿಸಿದರು.