ನೀರ್ಚಾಲು: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಗಳ ಅಂಗವಾಗಿ ಪ್ರತೀ ತಿಂಗಳು ನಡೆಯುವ ದುರ್ಗಾಪೂಜೆ, ವಿಶೇಷ ಅನ್ನದಾನ ಸೇವೆ ನಡೆಯಿತು.
ಇದೇ ಸಂದರ್ಭದಲ್ಲಿ ಕುಂಟಿಕಾನ ದೇವಸ್ಥಾನದ ಜೀರ್ಣೋದ್ಧಾರ ನಿಧಿಗೆ ವಿದ್ಯಾ ಕುಮಾರ್ ಅವರು ಒಂದು ಲಕ್ಷ ರೂ. ಚೆಕ್ನ್ನು ಸಮಿತಿ ಉಪಾಧ್ಯಕ್ಷ ಅಣ್ಣಪ್ಪ ಮಾಸ್ಟರ್ ಅವರ ಮೂಲಕ ಹಸ್ತಾಂತರಿಸಿದರು. ಸಮಿತಿ ಕಾರ್ಯದರ್ಶಿ ಕೆ.ಎಂ.ಶಾಂ ಭಟ್, ಆಡಳಿತ ಮೊಕ್ತೇಸರ ಶಂಕರನಾರಾಯಯ ಭಟ್ ಉಪಸ್ಥಿತರಿದ್ದರು. ವೇದಮೂರ್ತಿ ವೀರ ವೆಂಕಟ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿ ದಾನಿಗಳಿಗೆ ಪ್ರಸಾದ ವಿತರಿಸಿದರು.