Home ಧಾರ್ಮಿಕ ಕಾರ್ಯಕ್ರಮ ಕುಂಜಿಬೆಟ್ಟು ಶ್ರೀ ತುಳಜಾ ಭವಾನಿ ಮಂದಿರ ಉದ್ಘಾಟನೆ

ಕುಂಜಿಬೆಟ್ಟು ಶ್ರೀ ತುಳಜಾ ಭವಾನಿ ಮಂದಿರ ಉದ್ಘಾಟನೆ

ಮೆರವಣಿಗೆ, ಶ್ರೀ ದೇವಿಯ ಪ್ರತಿಷ್ಠೆ, ಚಂಡಿಕಾ ಹೋಮ, ಆರಾಧನೆ

1727
0
SHARE

ಉಡುಪಿ: ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಕುಂಜಿಬೆಟ್ಟು ನೇತೃತ್ವದಲ್ಲಿ ನೂತನವಾಗಿ ನಿರ್ಮಿಸಲಾದ ಜಿಲ್ಲಾ ಮರಾಟಿ ಸಮುದಾಯ ಭವನ ಮತ್ತು ಶ್ರೀ ತುಳಜಾ ಭವಾನಿ ಮಂದಿರದ ಉದ್ಘಾಟನೆ ಅಂಗವಾಗಿ ಶನಿವಾರ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲದಿಂದ ಹೊರಟ ಮೆರವಣಿಗೆಯು ಮಹಿಳೆಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ, ವಿವಿಧ ಬಿರುದಾವಳಿಗಳಿಂದ ಶ್ರೀ ದೇವಿಯ ಮಂದಿರದವರೆಗೆ ಯುವ ಸಂಘಟನೆ ಅಧ್ಯಕ್ಷ ಕೃಷ್ಣ ನಾಯ್ಕ ಕರ್ಜೆ ಅವರ ಉಸ್ತುವಾರಿಯಲ್ಲಿ ಸಾಗಿ ಬಂತು.

ರವಿವಾರ ಬೆಳಗ್ಗೆ ಗಣಹೋಮ, ಪ್ರತಿಷ್ಠೆ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ, ಚಂಡಿಕಾ ಹೋಮ, ವಿವಿಧ ಆರಾಧನೆಗಳೊಂದಿಗೆ ಶ್ರೀ ದೇವಿಯ ಪ್ರತಿಷ್ಠೆ ಸಂಪನ್ನಗೊಂಡಿತು.

ಸಂಘದ ಅಧ್ಯಕ್ಷ ಎಸ್‌. ಅನಂತ ನಾಯ್ಕ, ಗೌರವಾಧ್ಯಕ್ಷ ಡಾ| ಕೆ. ಸುಂದರ ನಾಯ್ಕ, ಕಾರ್ಯಾಧ್ಯಕ್ಷ ಕೆ.ಕೆ. ನಾಯ್ಕ, ಕಾರ್ಯದರ್ಶಿ ಕೆ.ಟಿ. ನಾಯ್ಕ, ಜತೆಕಾರ್ಯದರ್ಶಿ ಷಣ್ಮುಖ ನಾಯ್ಕ, ಕೋಶಾಧಿಕಾರಿಗಳಾದ ದೇವೇಂದ್ರ ನಾಯ್ಕ, ಕೆ. ಶ್ರೀನಿವಾಸ ನಾಯ್ಕ ಅಲೆವೂರು, ನಿಕಟಪೂರ್ವಾಧ್ಯಕ್ಷ ಎ. ನರಸಿಂಹ ನಾಯ್ಕ, ಪದಾಧಿಕಾರಿ ವಿಶ್ವನಾಥ್‌ ನಾಯ್ಕ, ಉಪಾಧ್ಯಕ್ಷರಾದ ಇಂದಿರಾ ಎನ್‌. ನಾಯ್ಕ, ಉಮೇಶ್‌ ನಾಯ್ಕ, ಕಾರ್ಯದರ್ಶಿ ಮಂಜುನಾಥ ನಾಯ್ಕ ಚಾಂತಾರು, ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಯುವ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು, ಸಂಘದ ಸದಸ್ಯರು, ಮರಾಟಿ ಸಮುದಾಯದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here