Home ಧಾರ್ಮಿಕ ಸುದ್ದಿ ಕುಂಜಾರು: ಆಮಂತ್ರಣ ಪತ್ರ ಬಿಡುಗಡೆ

ಕುಂಜಾರು: ಆಮಂತ್ರಣ ಪತ್ರ ಬಿಡುಗಡೆ

1583
0
SHARE

ನೆಹರೂನಗರ : ಯರ್ಮುಂಜ ಪಳ್ಳದಲ್ಲಿ ನಡೆಯಲಿರುವ ಅಶ್ವತ್ಥೋಪನಯನ ಮತ್ತು ವಿವಾಹ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಅನಾವರಣಗೊಳಿಸಲಾಯಿತು. ದೇವಸ್ಥಾನದ ಅರ್ಚಕ ಚಂದ್ರಶೇಖರ ಮಯ್ಯ ಆಮಂತ್ರಣ ಪತ್ರವನ್ನು ಬಿಡು ಗಡೆಗೊಳಿಸಿದರು.

ಶ್ರೀ ಅಶ್ವತ್ಥಕಟ್ಟೆ ದೇವತಾ ಸಮಿತಿ, ಶ್ರೀ ಧೂಮಾವತಿ ಯುವಕ ಮಂಡಲ ಯರ್ಮುಂಜಪಳ್ಳ, ಜುಮಾದಿಪಲಿಕೆ ಪಟ್ನೂರು, ಜಯಕರ್ನಾಟಕ ಪಟ್ನೂರು ಘಟಕದ ಆಶ್ರಯದಲ್ಲಿ ಎ. 1, 2ರಂದು ಅಶ್ವತ್ಥೋಪನಯನ ಮತ್ತು ವಿವಾಹ ಕಾರ್ಯಕ್ರಮ ನಡೆಯಲಿದೆ.

ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಈಶ್ವರ ಪ್ರಸಾದ ಬನಾರಿ, ಸದಸ್ಯ ರಾದ ಗೋವಿಂದರಾಜ್‌ ಅಂಡೆಪುಣಿ, ಶೀನಪ್ಪ ಪೂಜಾರಿ ಪಟ್ಟೆ, ಬನ್ನೂರು ಗ್ರಾ.ಪಂ. ಸದಸ್ಯರಾದ ಪಂಜಿಗುಡ್ಡೆ ಈಶ್ವರ ಭಟ್‌, ಮೋಹನ ಗೌಡ ವಾಲ್ತಾಜೆ, ಪ್ರಮುಖ ರಾದ ಗಿರಿಯಪ್ಪ ಪೂಜಾರಿ ಅಂಡೆಪುಣಿ, ಗಂಗಾಧರ ಗೌಡ ಕಡ್ತಿಮಾರ್‌, ದೇವಪ್ಪ ಪೂಜಾರಿ ಅಂಡೆಪುಣಿ, ರೋಹನ್‌ರಾಜ್‌ ಪಟ್ನೂರು, ಚಂದ್ರಶೇಖರ ಗೌಡ ಪಂಜಿ ಗುಡ್ಡೆ, ಲಕ್ಷ್ಮಣ ಪೂಜಾರಿ ಕೊಡಂಗೆ, ನಾರಾಯಣ ಗೌಡ ರೆಂಜಾಳ, ಜನಾರ್ದನ ಪಂಜಿಗುಡ್ಡೆ, ಐತ್ತಪ್ಪ ಗೌಡ, ನಾರಾಯಣ ಮೂಲ್ಯ, ಜಯರಾಜ್‌ ಪಟ್ಟೆ, ಗಂಗಾಧರ ಪೂಜಾರಿ, ಕಿರಣ್‌ ನಾಯ್ಕ, ಮನೋಜ್‌ ನಾಯ್ಕ, ಧನಂಜಯ ನಾಯ್ಕ, ಸಾಂತಪ್ಪ ನಾಯ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here