Home ಧಾರ್ಮಿಕ ಕಾರ್ಯಕ್ರಮ ಕುಂದೇಶ್ವರ ದೇವರಿಗೆ ವೈಭವದ ಮಹಾಶಿವರಾತ್ರಿ

ಕುಂದೇಶ್ವರ ದೇವರಿಗೆ ವೈಭವದ ಮಹಾಶಿವರಾತ್ರಿ

1337
0
SHARE

ಕುಂದಾಪುರ : ‘ಕುಂದಾಪುರದ ಅಧಿದೇವ’ ಶ್ರೀ ಕುಂದೇಶ್ವರ ದೇವರಿಗೆ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಮಹಾಶಿವರಾತ್ರಿ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಜಲಾಭಿಷೇಕ, ರುದ್ರಾಭಿಷೇಕ, ಮಹಾ ಮಂಗಳಾರತಿ, ದೀಪಾರಾಧನೆ, ಶತರುದ್ರಾಭಿಷೇಕ, ಇನ್ನಿತರ ಧಾರ್ಮಿಕ ವಿಧಿವಿಧಾನಗಳು ನಡೆದವು. ಬೆಳಗ್ಗಿನಿಂದಲೇ ಸಹಸ್ರ-ಸಹ್ರಸ ಸಂಖ್ಯೆಯ ಭಕ್ತಾದಿಗಳು ಆಗಮಿಸಿ, ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಸಂಜೆ ಹಣತೆ ದೀಪ ಸೇವೆ, ಮಹಾಮಂಗಳಾರತಿ, ರಂಗಪೂಜೆ ನೆರವೇರಿಸಲಾಯಿತು.

ದೇವರ ದರ್ಶನಕ್ಕೆ ಆಗಮಿಸಿದ ಎಲ್ಲ ಭಕ್ತರಿಗೂ ಕುಂದಾಪುರದ ಯುವಜನ ಸಭಾ ವತಿಯಿಂದ ಉಚಿತ ಪಾನಕ, ದೇವಸ್ಥಾನದ ಉಚಿತ ಪ್ರಸಾದ ವಿತರಿಸಲಾಯಿತು.

ನಿರಂತರ ಭಜನೆ
ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಕುಂದಾಪುರ ತಾ| ಭಜನ ಮಂಡಳಿ ಆಶ್ರಯದಲ್ಲಿ ನಿರಂತರ ಭಜನ ಸೇವೆ ನಡೆಯಿತು. ಕುಂದಾಪುರದ ಶ್ರೀ ಕುಂದೇಶ್ವರದ ಭಜನಾ
ಮಂಡಳಿ, ದ್ರಾವಿಡ ಬ್ರಾಹ್ಮಣ ಪರಿಷತ್‌ನ ಮಹಿಳಾ ವೇದಿಕೆ, ಶ್ರೀ ರಕ್ತೇಶ್ವರೀ ಭಜನ ಮಂಡಳಿ, ಏಕನಾಥೇಶ್ವರಿ ಭಜನಾ ಮಂಡಳಿ, ಶ್ರೀ ಸಿದ್ಧಿ ವಿನಾಯಕ ಮಹಿಳಾ ಭಜನಾ ಮಂಡಳಿ, ವಿಠಲವಾಡಿಯ ಶ್ರೀ ಕೀಳೇಶ್ವರಿ ಭಜನಾ ಮಂಡಳಿ, ಮದ್ದುಗುಡ್ಡೆ ಶ್ರೀ, ಮಾಸ್ತಿಯಮ್ಮ ಭಜನ ಮಂಡಳಿ, ತಲ್ಲೂರು ಮಾರನಮನೆ ಶ್ರೀ ರಕ್ತೇಶ್ವರಿ ಭಜನ ಮಂಡಳಿ ಭಜನ ಕಾರ್ಯಕ್ರಮಗಳನ್ನು ನೀಡಿದರು.

ವಿವಿಧೆಡೆ ಶಿವನ ಆರಾಧನೆ
ಬೈಂದೂರಿನ ಸೋಮೇಶ್ವರ, ಸೇನೇಶ್ವರ, ವನಕೊಡ್ಲು, ಕಿರಿಮಂಜೇಶ್ವರದ ಅಗಸ್ತ್ಯೇಶ್ವರ, ಗುಜ್ಜಾಡಿಯ ಗುಹೇಶ್ವರ, ತಲ್ಲೂರಿನ ಮಹಾಲಿಂಗೇಶ್ವರ, ಹಟ್ಟಿಯಂಗಡಿಯ ಶ್ರೀ ಲೋಕನಾಥೇಶ್ವರ, ಪಂಚ ಶಂಕರ ನಾರಾಯಣ ಕ್ಷೇತ್ರಗಳು, ಕುಂಭಾಶಿ ಶ್ರೀ ಹರಿಹರ ದೇವಸ್ಥಾನ, ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೆದೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬೇಳೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರಿನ ಮಹಾಲಿಂಗೇಶ್ವರ ಸಹಿತ ಕುಂದಾಪುರ ಹಾಗೂ ಬೈಂದೂರು ಭಾಗದ ಅನೇಕ ಶಿವನ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿ ಆಚರಣೆ ನಡೆಯಿತು.

LEAVE A REPLY

Please enter your comment!
Please enter your name here