Home ಧಾರ್ಮಿಕ ಸುದ್ದಿ ಕೊಂಕಣಿ ಖಾರ್ವಿ ಸಮಾಜದವರಿಂದ ಶೃಂಗೇರಿ ಗುರು ದರ್ಶನ

ಕೊಂಕಣಿ ಖಾರ್ವಿ ಸಮಾಜದವರಿಂದ ಶೃಂಗೇರಿ ಗುರು ದರ್ಶನ

1580
0
SHARE
ಕಾರ್ಯಕ್ರಮದಲ್ಲಿ ಶ್ರೀ ವಿಧುಶೇಖರ ಭಾರತೀ ಶ್ರೀಗಳು ಆಶೀರ್ವಚನ ನೀಡಿದರು.

ಕುಂದಾಪುರ: ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಶ್ರೀಗಳ‌ ಹಾಗೂ ಅವರ ತತ್ಕರ ಕಮಲ ಸಂಜಾತ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಶ್ರೀಗಳ ಚಾತುರ್ಮಾಸ್ಯ ಸಂದರ್ಭ ಕೊಂಕಣಿ ಖಾರ್ವಿ ಸಮಾಜದ 20ನೇ ವರ್ಷದ ಸಾಮೂಹಿಕ ಗುರುದರ್ಶನ ಕಾರ್ಯ ಕ್ರಮ ಶೃಂಗೇರಿಯಲ್ಲಿ ನಡೆಯಿತು.

ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಶ್ರೀಗಳು, ಕೊಂಕಣಿ ಖಾರ್ವಿ ಸಮಾಜವು ಅನಾದಿ ಕಾಲದಿಂದಲೂ ಶೃಂಗೇರಿ ಪೀಠವನ್ನು ಭಕ್ತಿ ಶ್ರದ್ಧೆಯಿಂದ ನಡೆದುಕೊಂಡು ಬಂದಿರುವುದೇ ನಿಮ್ಮ ಏಳ್ಗೆಗೆ ಸಹಕಾರಿ ಯಾಗಿದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಭಕ್ತರ ಗುರುದರ್ಶನ ಹೆಚ್ಚಾಗುತ್ತಿದ್ದ ರಿಂದ ಚಾರ್ತುಮಾಸ್ಯದ ಮೊದಲ ಶನಿವಾರ ಉಡುಪಿ ಹಾಗೂ ಅವಿಭವಿಜಿತ ದ.ಕ. ಹಾಗೂ ಉಡುಪಿಗೆ ಮೊದಲ ರವಿವಾರ, ಉತ್ತರ ಕನ್ನಡ ಜಿಲ್ಲೆಯ ಭಕ್ತರಿಗೆ ಅನುವು ಮಾಡಿಕೊಡಲಾಗಿದೆ ಎಂದರು.

ಜಗದ್ಗುರು ಶಂಕರಾಚಾರ್ಯಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಗುರುದರ್ಶನ ಸಮಿತಿಯ ಅಧ್ಯಕ್ಷ ವಂಸತ ಖಾರ್ವಿ ಭಟ್ಕಳ ಪ್ರಸ್ತಾವಿಸಿ, ಅನಾದಿಕಾಲದಿಂದಲೂ ಕೊಂಕಣಿ ಖಾರ್ವಿ ಸಮಾಜವು ಶೃಂಗೇರಿ ಗುರುಪೀಠವನ್ನು ನೆನೆದುಕೊಂಡು ಬಂದಿದ್ದು ಜಗದ್ಗುರು ಶ್ರೀ ಅಭಿನವ ತೀರ್ಥ ಶ್ರೀಗಳ ಕಾಲದಲ್ಲಿ ಈ ಕೊಂಡಿ ಅತ್ಯಂತ ಗಟ್ಟಿಯಾಯಿತು. ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಪಟ್ಟಾಭೀಷೇಕ ಸಮಾಜದಲ್ಲಿ ಸುವರ್ಣಯುಗ ಆರಂಭಿಸಿತು. ಅದೇ ಅನುಗ್ರಹ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಕೃಪಾಶೀರ್ವಾದದಲ್ಲೂ ಮುಂದುವರಿದಿದೆ ಎಂದರು.

ಕಾರ್ಯಕ್ರಮದಲ್ಲಿ ಉ.ಕ., ಉಡುಪಿ, ಅವಿಭವಿಜಿತ ದ.ಕ. ಬೆಂಗಳೂರು, ಶಿವಮೊಗ್ಗ, ಗೋವಾ ಹಾಗೂ ಮುಂಬಯಿಯಿಂದ ಸುಮಾರು ಆರು ಸಾವಿರಕ್ಕೂ ಹೆಚ್ಚಿನ ಭಕ್ತರು ಆಗಮಿಸಿ ಗುರುದರ್ಶನ ಪಡೆದರು. ಜಗದ್ಗುರು ಸನ್ನಿಧಿಯಲ್ಲಿ ಪಾದ ಪೂಜೆ, ಭಿಕ್ಷಾವಂದನೆ ವಿವಿಧ ಸೇವೆಗಳು ನಡೆದವು. ಶೃಂಗೇರಿ ಪೀಠದ ಉ.ಕ., ದ.ಕ. ಜಿಲ್ಲೆಯ ಪ್ರಾಂತೀಯ ಧರ್ಮಾಧಿಕಾರಿ ವೇದಮೂರ್ತಿ ಲೋಕೇಶ ಅಡಿಗ ಬಡಾಕೆರೆ ಉಪಸ್ಥಿತರಿದ್ದರು.

ಗುರುದರ್ಶನ ಸಮಿತಿಯ ಉಪಾಧ್ಯಕ್ಷ ಉಮೇಶ ಮೇಸ್ತ, ಕಾರ್ಯದರ್ಶಿ ವೆಂಕಟೇಶ ಮೇಸ್ತ ಅಖೀಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಅಧ್ಯಕ್ಷ ಕೆ. ಬಿ. ಖಾರ್ವಿ, ಹಿರಿಯ ಉಪಾಧ್ಯಕ್ಷ ಮೋಹನ ಬಾನಾವಳಿಕರ ಗೋವಾ, ವಿದ್ಯಾರಂಗ ಮಿತ್ರಮಂಡಳಿ ಕುಂದಾಪುರ ಅಧ್ಯಕ್ಷ ದಿನಕರ ಪಟೇಲ್, ಮಹಾಕಾಳಿ ದೇವಸ್ಥಾನ ಖಾರ್ವಿಕೇರಿ ಅಧ್ಯಕ್ಷ ಪ್ರಕಾಶ ಖಾರ್ವಿ, ಮಹಿಳಾ ಮಂಡಳಿ ಅಧ್ಯಕ್ಷೆ ವಾಸಂತಿ ಸಾರಂಗ, ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here