ಕುಂದಾಪುರ: ಇಲ್ಲಿನ ಪವಿತ್ರ ರೋಜರಿ ಮಾತಾ ಇಗರ್ಜಿಯಲ್ಲಿ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಸೆಕ್ಯುಲರ್ ಮೇಳದ ಧರ್ಮಗುರುಗಳ ಪಾಲಕ ಸಂತ ಜೋನ್ ಬ್ಯಾಪ್ಟಿಸ್ಟ್ ಮಾರೀ ವಿಯಾನ್ನಿ ಇವರು ಇಹ ಲೋಕ ತ್ಯಜಿಸಿದ ದಿನ ಆ.4 ರಂದು ಅವರ ನೆನಪಿಗಾಗಿ ಧರ್ಮಗುರುಗಳ ಸ್ಮರಣೆಯನ್ನು ಆಚರಿಸಿ ಇಗರ್ಜಿಯ ಧರ್ಮಗುರುಗಳಿಗೆ ಅಭಿನಂದಿಸಲಾಯಿತು.
ಇಗರ್ಜಿಯ ಪ್ರಧಾನ ಧರ್ಮ ಗುರುಗಳಾದ ಫಾ| ಸ್ಟ್ಯಾನಿ ತಾವ್ರೊ ಪ್ರವಚನ ನೀಡಿದರು.
ಧರ್ಮಗುರು ಫಾ| ವಿಜಯ್ ಡಿ’ಸೋಜಾ ದಿವ್ಯ ಬಲಿದಾನವನ್ನು ಅರ್ಪಿಸಿದರು.
ನಿವೃತ್ತ ಅಧ್ಯಾಪಕ ಲುವಿಸ್ ಜೆ. ಫೆರ್ನಾಂಡಿಸ್ ಧರ್ಮಗುರುಗಳಿಗೆ ಶುಭ ಕೋರಿದರು.
ಪಾಲನ ಮಂಡಳಿ ಕಾರ್ಯದರ್ಶಿ ಫೆಲ್ಸಿಯಾನ್ ಡಿ’ಸೋಜಾ, 18 ಆಯೋಗಗಳ ಸಂಯೋಜಕಿ ಪ್ರೇಮಾ ಡಿ’ಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಧರ್ಮ ಭಗಿನಿಯರು ಹಾಗೂ ಭಕ್ತಾದಿಗಳು ಧರ್ಮಗುರುಗಳನ್ನು ಅಭಿನಂದಿಸಿದರು.