Home ಧಾರ್ಮಿಕ ಸುದ್ದಿ ಕುಂದಾಪುರ: ಭಗಿನಿ ದೀಕ್ಷೆಯ ಸ್ವರ್ಣ ಮಹೋತ್ಸವ

ಕುಂದಾಪುರ: ಭಗಿನಿ ದೀಕ್ಷೆಯ ಸ್ವರ್ಣ ಮಹೋತ್ಸವ

264
0
SHARE

ಕುಂದಾಪುರ: ರೋಸ್ಲಿಂಡಾ ಅವರು ಭಗಿನಿ ದೀಕ್ಷೆ ತೆಗೆದುಕೊಂಡ ಸ್ವರ್ಣ ಮಹೋತ್ಸವ‌ ಪ್ರಯುಕ್ತ ಜೂ. 16ರಂದು ರೋಜರಿ ಮಾತಾ ಇಗರ್ಜಿಯಲ್ಲಿ ಪವಿತ್ರ ಬಲಿದಾನ ಅರ್ಪಿಸುವ ಮೂಲಕ ಆಚರಿಸಲಾಯಿತು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಡಾ| ಜೆರಾಲ್ಡ್ ಐಸಾಕ್‌ ಲೋಬೊ ಅಧ್ಯಕ್ಷತೆ ವಹಿಸಿದ್ದರು. ರೋಸ್ಲಿಂಡಾ ಅವರ ಸಹೋದರ ವಂ| ಫರ್ಡಿನಾಂಡ್‌ ಗೊನ್ಸಾಲ್ವಿಸ್‌, ಕುಂದಾಪುರ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಸ್ಟ್ಯಾನಿ ತಾವ್ರೊ, ವಂ| ಸ್ಟ್ಯಾನಿ ಬಿ.ಲೋಬೊ, ವಂ| ರೋಮಿಯೊ ಲುವಿಸ್‌, ವಂ| ರೊಯ್ಸನ್‌ ಫೆರ್ನಾಂಡಿಸ್‌, ವಂ| ರೋಹನ್‌ ಡಾಯಸ್‌, ವಂ| ಲುವಿಸ್‌ ಡೆಸಾ, ವಂ| ಜೊವೆಲ್ ಒಲಿವೇರಾ ಮತ್ತು ಇತರರು ಸಹ ಬಲಿದಾನವನ್ನು ಅರ್ಪಿಸಿದರು.

ಕಿರಣ್‌ ಗೊನ್ಸಾಲ್ವಿಸ್‌ ಸ್ವಾಗತಿಸಿದರು. ಮರ್ಲಿನ್‌ ಗೊನ್ಸಾಲ್ವಿಸ್‌ ವಂದಿಸಿದರು. ವಂ| ಲುವಿಸ್‌ ಡೆಸಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here