ಕುಂದಾಪುರ: ಪರರ ಸೇವೆ ಮಾಡುವುದೇ ನಿಜವಾದ ಕ್ರೈಸ್ತರ ಲಕ್ಷಣಗಳು ಎಂದು ಉಡುಪಿ ಧರ್ಮಪ್ರಾಂತ್ಯದ ಕಿರು ಕ್ರೈಸ್ತ ಸಮುದಾಯದ ನಿರ್ದೇಶಕ ಫಾ| ಹೆರಾಲ್ಡ್ ಪಿರೇರಾ ಹೇಳಿದರು.
ಇಲ್ಲಿನ ಪವಿತ್ರ ರೋಜರಿ ಮಾತಾ ಕಿರು ಕ್ರೈಸ್ತ ಸಮುದಾಯದ ಪ್ರೇರಕರ, ಗುರಿಕಾರರ, ವಾಳೆ ಸಮಿತಿಯ ಸದಸ್ಯರಿಗೆ ಚರ್ಚ್ ಸಭಾ ಭವನದಲ್ಲಿ ಜು.21ರಂದು ನಡೆದ ಶಿಬಿರದಲ್ಲಿ ಮಾತನಾಡಿದರು.
ಯೇಸುವಿಗಾಗಿ ಕಷ್ಟ, ಹಿಂಸೆ, ಅವಮಾನ, ಅನುಭವಿಸಿದಲ್ಲಿ ನೀವು ಯೇಸುವಿನ ನಿಜವಾದ ಅನುಯಾಯಿಗಳು. ಕಿರು ಕ್ರೈಸ್ತ ಸಮುದಾಯ ಕೇವಲ ಇಗರ್ಜಿಯಲ್ಲಿ ಮಾತ್ರ ಸಕ್ರಿಯವಾಗುವುದಲ್ಲ, ನಿಮ್ಮ ನಿಮ್ಮ ವಾಳೆಯಲ್ಲಿಯೂ ಸಕ್ರಿಯವಾಗಿರಬೇಕು. ದೇವರು ಇಗರ್ಜಿಯಲ್ಲಿ ಮಾತ್ರವಲ್ಲ ವಾಳೆಯಲ್ಲಿಯೂ ಇದ್ದು ವಾಳೆಯ ಸಮುದಾಯದಲ್ಲಿ ಕ್ರೈಸ್ತರು ಒಟ್ಟು ಸೇರಿ ಯೇಸುವಿನ ತತ್ವಗಳಂತೆ, ಕಷ್ಟದಲ್ಲಿ ಇರುವವರಿಗೆ ಸ್ಪಂದಿಸಿ, ನಿಸ್ಸಹಾಯಕರಿಗೆ, ವೃದ್ಧರಿಗೆ, ರೋಗಿಗಳಿಗೆ ಸಹಾಯಹಸ್ತ ನೀಡಿರಿ ಎಂದು ತಿಳಿಸಿದರು.
ಪ್ರಧಾನ ಧರ್ಮಗುರು ಫಾ| ಸ್ಟ್ಯಾನಿ ತಾವ್ರೊ, ಕಿರು ಕ್ರೈಸ್ತ ಸಮುದಾಯದಿಂದ ವಾಳೆಯಲ್ಲಿ ಪ್ರೀತಿ, ಒಗ್ಗಟ್ಟು ಉಂಟಾಗುತ್ತದೆ ಎಂದರು.
ಸಹಾಯಕ ಧರ್ಮಗುರು ಫಾ|ವಿಜಯ್ ಡಿ’ಸೋಜಾ, ಪ್ರಾಂಶುಪಾಲ ಫಾ| ಪ್ರವೀಣ್ ಅಮೃತ್ ಮಾರ್ಟಿಸ್ ಉಪಸ್ಥಿತರಿದ್ದರು.
ಲೂರ್ಡ್ಸ್ ವಾಳೆಯಾ ಗ್ರೆಟ್ಟಾ ಡಿ’ಸೋಜಾ ಶಿಬಿರವನ್ನು ಸಂಯೋಜಿಸಿದ್ದರು. ಸಂತ ಜೋಸೆಫ್ ವಾಜ್ ವಾಳೆಯ ವಿನಯಾ ಡಿಕೋಸ್ತಾ ಸ್ವಾಗತಿಸಿ, ನಿರೂಪಿಸಿದರು. ಕಾರ್ಮೆಲ್ ವಾಳೆಯ ಪ್ರೇರಕಿ ಸಂಗೀತ ಪಾಯ್ಸ ವಂದಿಸಿದರು.