Home ಧಾರ್ಮಿಕ ಸುದ್ದಿ ಶ್ರೀ ಶಿವ ಸುಜ್ಞಾನತೀರ್ಥ ಮಹಾಸ್ವಾಮೀಜಿ ಚಾತುರ್ಮಾಸ್ಯ ಆಹ್ವಾನ ಪತ್ರಿಕೆ ಬಿಡುಗಡೆ

ಶ್ರೀ ಶಿವ ಸುಜ್ಞಾನತೀರ್ಥ ಮಹಾಸ್ವಾಮೀಜಿ ಚಾತುರ್ಮಾಸ್ಯ ಆಹ್ವಾನ ಪತ್ರಿಕೆ ಬಿಡುಗಡೆ

1525
0
SHARE

ಕುಂದಾಪುರ: ಚಾತುರ್ಮಾಸ್ಯ ವ್ರತವನ್ನು ಕೇವಲ ಯತಿಗಳೇ ಮಾಡಬೇಕೆಂದೇನಿಲ್ಲ. ನಿಯಮ ತಿಳಿದುಕೊಂಡಿದ್ದರೆ ಬ್ರಹ್ಮಚಾರಿಗಳು, ಗೃಹಸ್ಥಾಶ್ರಮಿಗಳು, ವಾನಪ್ರಸ್ಥಾಶ್ರಮಿಗಳೂ ಮಾಡಬಹುದು. ಎಂದು ಶ್ರೀ ವಿಶ್ವಕರ್ಮ ಜಗದ್ಗ‌ುರು ಪೀಠ ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾ ಸಂಸ್ಥಾನದ ಜಗದ್ಗುರು ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮೀಜಿ ನುಡಿದರು.

ವಿಶ್ವ‌ಕರ್ಮ ಜಗದ್ಗುರು ಪೀಠದ ಕಜ್ಕೆಯ ಶಾಖಾ ಮಠದಲ್ಲಿ ಚಾತುರ್ಮಾಸ್ಯ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವದಿಸಿದರು.

ಯತಿಗಳು ಲೋಕ ಕಲ್ಯಾಣಾರ್ಥವಾಗಿ ಸರ್ವಸ್ವವನ್ನೂ ತ್ಯಜಿಸಿ, ಕಾಷಾಯ ಧರಿಸಿದ ಅನಂತರ ಚಾತುರ್ಮಾಸ್ಯ ಕಡ್ಡಾಯ ಎಂದು ಹೇಳಲ್ಪಡುತ್ತದೆ. ಇದನ್ನು ಎಲ್ಲ ಯತಿಗಳು ಮಾಸದಲ್ಲಿ ಮಾಡುವಂಥ‌ದ್ದನ್ನು ಒಂದು ಪಕ್ಷದಲ್ಲಿ ಮಾಡುವಂತ ಪರಿಪಾಠ ಇಟ್ಟುಕೊಂಡು ಅದನ್ನು 2 ತಿಂಗಳಲ್ಲಿ ಮುಗಿಸುತ್ತಾರೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾಮಠ ನಿರ್ಮಾಣ ಸಮಿತಿಯ ಅಧ್ಯಕ್ಷ ಅಲೆವೂರು ಯೋಗೀಶ್‌ ಆಚಾರ್ಯ ಅವರು ವಹಿಸಿದ್ದರು.

ನಾಲ್ಕೂರು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಸಂತೋಷ ಹೆಗ್ಡೆ ಮಾರಾಳಿ, ನೇತಾಜಿ ಸೇವಾ ವೇದಿಕೆ ಅಧ್ಯಕ್ಷ ಪ್ರಸಾದ್‌ ಹೆಗ್ಡೆ ಮಾರಾಳಿ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಎಸ್‌. ರಾಘವೇಂದ್ರ ಆಚಾರ್ಯ ಸಾೖಬರಕಟ್ಟೆ, ಉದ್ಯಮಿ ಹಾಗೂ ಚಾತುರ್ಮಾಸ್ಯ ಸಮಿತಿ ಉಪಾಧ್ಯಕ್ಷ ಕಾಶೀನಾಥ ಶೆಣೈ ಕಜ್ಕೆ, ಚಾತುರ್ಮಾಸ್ಯ ಸಮಿತಿ ಗೌರವ ಸಲಹೆಗಾರ ಕರುಣಾಕರ ಶೆಟ್ಟಿ ಕಜ್ಕೆ, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ ಆಚಾರ್ಯ, ಚಾತುರ್ಮಾಸ್ಯ ಸಮಿತಿ ಉಪಾಧ್ಯಕ್ಷ ಶಿಲ್ಪಿ ಶ್ರೀಧರ ಆಚಾರ್ಯ ಬಂಡೀಮಠ, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಸಹ ಮೊಕ್ತೇಸರ ಗಂಗಾಧರ ಆಚಾರ್ಯ ಡಿಂಡಿಬೆಟ್ಟು, ಸಹಚಿಂತನ ಪತ್ರಿಕೆ ಗೌರವ ಸಂಪಾದಕ ಬಿ. ಅನಂತಯ್ಯ ಆಚಾರ್ಯ ಮಣಿಪಾಲ, ಚಾತುರ್ಮಾಸ್ಯ ಸಮಿತಿ ಖಜಾಂಚಿ ಉಮೇಶ್‌ ಆಚಾರ್ಯ ಬಾರ್ಕೂರು, ಸತೀಶ್‌ ಆಚಾರ್ಯ ಬೇಳೂರು, ಜತೆ ಕಾರ್ಯದರ್ಶಿ ಜಯರಾಮ ಆಚಾರ್ಯ ಸಾಲಿಗ್ರಾಮ, ಸುರೇಶ ಆಚಾರ್ಯ ಬಾರ್ಕೂರು, ಚಂದ್ರಶೇಖರ ಆಚಾರ್ಯ ಶಿವಪುರ, ಆರ್ಥಿಕ ಸಮಿತಿ ಅಧ್ಯಕ್ಷ ಮೋಹನ್‌ ಬಿ. ಆಚಾರ್ಯ ನೀಲಾವರ, ಸ್ಥಳದಾನಿ ಕೃಷ್ಣಯ್ಯ ಶೆಟ್ಟಿ ಕಜ್ಕೆ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಮಾರಾಳಿ ರವಿಚಂದ್ರ ಆಚಾರ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಚಿತ್ತೂರು ಪ್ರಭಾಕರ ಆಚಾರ್ಯ ಅವರು ನಿರೂಪಿಸಿದರು.

LEAVE A REPLY

Please enter your comment!
Please enter your name here