ಕುಂದಾಪುರ: ಶ್ರೀ ನಾರಾಯಣ ಗುರು ಯುವಕ ಮಂಡಲ ಕುಂದಾಪುರ ಆಶ್ರಯದಲ್ಲಿ ಇಲ್ಲಿನ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಅ.5 ರಿಂದ ಆಯೋಜಿಸಲ್ಪಟ್ಟ 42 ನೇ ವರ್ಷದ ಕುಂದಾಪುರ ದಸರಾ ಮಹೋತ್ಸವವು ಮಂಗಳವಾರ ರಾತ್ರಿ ವೈಭವದ ಶೋಭಯಾತ್ರೆಯೊಂದಿಗೆ ಸಂಪನ್ನಗೊಂಡಿತು.
ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಿಂದ ಆರಂಭಗೊಂಡ ವಿಸರ್ಜನಾ ಮೆರವಣಿಗೆಯೂ ಶಾಸ್ತ್ರೀ ಸರ್ಕಲ್ವರೆಗೆ ತೆರಳಿ, ಅಲ್ಲಿಂದ ಪಾರಿಜಾತ ಸರ್ಕಲ್, ಹೊಸ ಬಸ್ ನಿಲ್ದಾಣ ಮೂಲಕವಾಗಿ ಪಂಚಗಂಗಾವಳಿ ನದಿಯಲ್ಲಿ ಶಾರದಾ ದೇವಿಯ ವಿಗ್ರಹವನ್ನು ವಿಸರ್ಜಿಸಲಾಯಿತು.
ಆಕರ್ಷಿಸಿದ ಟ್ಯಾಬ್ಲೋಗಳು
ಅದ್ಧೂರಿ ಶೋಭಾಯಾತ್ರೆಯಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ, ಅಸೋಡಿನ ನಂದಿ, ತಟ್ಟಿರಾಯ, ಕೀಲು ಕುದುರೆ, ಡೊಳ್ಳು ಕುಣಿತ, ಹೇರಿಕುದ್ರುವಿನ ಹುಲಿ ವೇಷ, ಕಡ್ಗಿ ಫ್ರೆಂಡ್ಸ್ (ಅರ್ಜಂಟೈನೋಸಾರಸ್), ಕೋಡಿಯ ಮೊಸಳೆ, ಚಿಕ್ಕನ್ಸಾಲ್ ಜಂಬೂ ಸವಾರಿ, ಬಿಲ್ಲವಾಸ್, ನೇರಳಕಟ್ಟೆ, ಹಂಗಳೂರಿನ ಡಿ.ಜೆ., ಗಂಗೊಳ್ಳಿಯ ಕೋಟಿ ಚೆನ್ನಯ, ತಲ್ಲೂರಿನ ಶಿಲ್ಪಕಲೆ, ವಂಡ್ಸೆಯ ಯುದ್ಧ ಟ್ಯಾಂಕರ್, ಹಳೆ ಹಳೆ ಹಳಿವೆಯ ಏರ್ ಸ್ಟೈÅಕ್, ಮದ್ದುಗುಡ್ಡೆಯ ಯಕ್ಷಗಾನ, ಚರ್ಚ್ ರಸ್ತೆ – ರಂಗನಹಿತ್ಲುವಿನ ಕೌರವ, ಕೋಣಿಯ ಹಾಲಿವುಡ್ ವೇಷ, ಕೋಟೇಶ್ವರ ಮಹಿಷ ಮರ್ದಿನಿ, ಮೀನು ಮಾರುಕಟ್ಟೆಯ ಶ್ರೀ ದೇವಿ ಮಹಾತೆ¾, ನೇರಂಬಳ್ಳಿ ವಾಮನ ಅವತಾರ, ಹುಣ್ಸೆಕಟ್ಟೆ – ವಡೇರಹೋಬಳಿಯ ವಾಸುಕಿ ಅವತಾರ, ಬೀಜಾಡಿ – ಗೋಪಾಡಿ – ವಕ್ವಾಡಿಯ ಆಂಜನೇಯ, ವಿಠಲವಾಡಿಯ ಕಥಕ್ಕಳಿ, ಚಂಡೆ ವಾದನ ಆಕರ್ಷಿಸಿದವು.