ಕುಂದಾಪುರ: ಕನ್ಯಾನ ಗ್ರಾಮದ ಕೂಡ್ಲು ಬಾಡಬೆಟ್ಟುವಿನ ಶ್ರೀ ಶನೀಶ್ವರ ದೇವಸ್ಥಾನದ ಸಮೀಪದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ 9 ದಿನಗಳ ಕಾಲ ಶರನ್ನವರಾತ್ರಿ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ನವರಾತ್ರಿಯ ಕೊನೆಯ ದಿನ ನೇರಳಕಟ್ಟೆಯ ಗುರುರಾಜ ಸೋಮಯಾಜಿ ನೇತೃತ್ವದಲ್ಲಿ ಚಂಡಿಕಾಯಾಗ ಹಾಗೂ ಪಾರಾಯಣ ಪೂಜೆ, ಅದೇ ದಿನ ಸಂಜೆ ರಂಗಪೂಜೆ, ನವರಾತ್ರಿ ಪೂಜೆ ನೆರವೇರಿತು. ಕ್ಷೇತ್ರದ ಧರ್ಮದರ್ಶಿ ಜಯರಾಮ ಬಾಡಬೆಟ್ಟು ಮತ್ತಿತರರು ಪಾಲ್ಗೊಂಡಿದ್ದರು.