Home ಧಾರ್ಮಿಕ ಸುದ್ದಿ ಕುಂದಾಪುರ: ದಾರು ಶಿಲ್ಪದ ಗುರುಪೀಠ ಸಮರ್ಪಣೆ

ಕುಂದಾಪುರ: ದಾರು ಶಿಲ್ಪದ ಗುರುಪೀಠ ಸಮರ್ಪಣೆ

1659
0
SHARE

ಕುಂದಾಪುರ: ಗಾಣಿಗ ಸಮಾಜದ ಕುಲಗುರು ಶ್ರೀ ಲಕ್ಷ್ಮೀಂದ್ರ ತೀರ್ಥ ಸ್ವಾಮೀಜಿ ಕುಂದಾಪುರ ವಡೇರ ಹೋಬಳಿಯ ಮೂಲ ಮಠ ವ್ಯಾಸರಾಜ ಮಠದಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿದ್ದು, ಸೋಮವಾರ ಕಾಷ್ಠ ಶಿಲ್ಪದ ಗುರುಪೀಠ ಸಮರ್ಪಣಾ ಕಾರ್ಯಕ್ರಮ ನಡೆಯಿತು. ದಾನಿಗಳಾದ ಸಾಗರದ ಶ್ರೀನಿವಾಸ ಗಾಣಿಗ ಮತ್ತು ಕುಟುಂಬಸ್ಥರು ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳ ನೇತೃತ್ವದಲ್ಲಿ ಗುರುಪೀಠವನ್ನು ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಕುಂದಾಪುರ ತಾ| ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೊಗ್ಗ ಗಾಣಿಗ, ಪ್ರ. ಕಾರ್ಯದರ್ಶಿ ಕೆ. ಭಾಸ್ಕರ, ಕೋಶಾಧಿಕಾರಿ ಪರಮೇಶ್ವರ್‌ ಜಿ.ಬಿ., ಶ್ರೀ ವ್ಯಾಸರಾಜ ಸೇವಾ ಟ್ರಸ್ಟ್‌ನ ಪ್ರ. ಕಾರ್ಯದರ್ಶಿ ಶ್ರೀನಿವಾಸ ಗಾಣಿಗ, ಕೋಶಾಧಿಕಾರಿ ಗಣಪಯ್ಯ ಗಾಣಿಗ, ಹಿರಿಯರಾದ ಸುಧೀರ್‌ ಪಂಡಿತ್‌, ಗೋಪಾಲ ಚೆಲ್ಲಿಮಕ್ಕಿ, ರಮಾನಂದ ಹಾಗೂ ಶಿರಸಿ, ಭಟ್ಕಳ, ಹೊನ್ನಾವರ, ಕುಮಟಾ, ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಬಾರ್ಕೂರು ಗಾಣಿಗ ಸಮಾಜದ ಅಧ್ಯಕ್ಷರು, ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here