ಕುಂದಾಪುರ: ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸ ವದ ಹಾಗೂ ಸಂಕಷ್ಟ ಹರ ಚತುರ್ಥಿ ಪ್ರಯುಕ್ತ ಬುಧವಾರ ಎರಡು ಬಾರಿ 1008 ತೆಂಗಿನ ಕಾಯಿ (ಅಷ್ಟೋತ್ತರ ಸಹಸ್ರನಾಳಿಕೇರ) ಮಹಾ ಗಣಯಾಗ ಮತ್ತು ನವಚಂಡೀ ಹವನ, ಮಹಾ ಪೂಜೆ ನಡೆಯಿತು.
ರಾತ್ರಿ ಸಂಕಷ್ಟ ಚತುರ್ಥಿ ಮಹಾ ಪೂಜೆಯಲ್ಲಿ ದೇವಸ್ಥಾನದ ಸಂಪೂರ್ಣ ಪುಷ್ಪಾಲಂಕಾರ ಸೇವೆ ಯನ್ನು ಸುರತ್ಕಲ್ನ ಜೆ. ಡಿ. ವೀರಪ್ಪ ಸುರತ್ಕಲ್ ಅವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಎಚ್. ಬಾಲಚಂದ್ರ ಭಟ್, ಹಟ್ಟಿಯಂಗಡಿ ಸಿದ್ಧಿ ವಿನಾಯಕ ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶರಣ ಕುಮಾರ, ಕುಮಟಾ ಲೆಕ್ಕ ಪರಿಶೋಧಕ ಜಿ.ಎಸ್. ಕಾಮತ್ ಹಾಗೂ ದೇವಸ್ಥಾನದ ವಾರ್ಷಿಕ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಭಕ್ತರು ಭಾಗಿಯಾಗಿದ್ದರು.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮತ್ ಶ್ರೀ ವಿದ್ಯಾಧಿರಾಜತೀರ್ಥ ಶ್ರೀ ಪಾದ ವಡೇರ ಸ್ವಾಮೀಜಿ, ಪಟ್ಟ ಶಿಷ್ಯ ಶ್ರೀಮತ್ ಶ್ರೀ ವಿದ್ಯಾಧೀಶತೀರ್ಥ ಸ್ವಾಮಿಜಿ ಸಹಸ್ರ ನಾಳಿಕೇರ ಗಣಪತಿಯಾಗ ಭಾಗವಹಿಸಿದ್ದರು.