ಕುಂದಾಪುರ: ಕುಂಭಾಸಿ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರೀ ದೇವಸ್ಥಾನದ ದೇವರ ವಿಗ್ರಹಕ್ಕೆ ಬಂಗಾರದ ಕವಚ, ಬೆಳ್ಳಿ ಹಾಗೂ ಚಿನ್ನ ಲೇಪಿತ ಪಲ್ಲಕ್ಕಿ ಮತ್ತು ಪ್ರಭಾವಳಿಯನ್ನು ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಅ.7ರಂದು ಸಮರ್ಪಿಸಲಾಗುವುದು.
ದೇವರಿಗೆ ಅರ್ಪಿಸುವ ಈ ಕವಚ, ಪಲ್ಲಕ್ಕಿ ಹಾಗೂ ಪ್ರಭಾವಳಿಯನ್ನು ಉಡುಪಿಯ ಖ್ಯಾತ ಚಿನ್ನಾಭರಣ ಮಳಿಗೆಯಾಗಿರುವ ಆಭರಣ ಜುವೆಲರ್ಸ್ ತಯಾರಿಸಿದ್ದು, ನುರಿತ ತಜ್ಞರು ಉಸ್ತುವಾರಿ ವಹಿಸಿಕೊಂಡಿದ್ದರು. ಇದನ್ನು ಸೇವಾ ರೂಪದಲ್ಲಿ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದ ಧರ್ಮದರ್ಶಿ ಅನಿತಾ ಮತ್ತು ದೇವರಾಯ ಎಂ. ಶೇರುಗಾರ್ ಸಮರ್ಪಿಸಲಿದ್ದಾರೆ.
ಆಭರಣ ಜುವೆಲರ್ಸ್ ಉಡುಪಿ, ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಕುಂದಾಪುರ, ಪಡುಬಿದ್ರೆ, ಬೈಂದೂರು, ಮಂಗಳೂರು, ಬೆಳ್ತಂಗಡಿ, ಶಿವಮೊಗ್ಗ, ಸಾಗರ, ಕುಮಟಾ, ಚಿಕ್ಕಮಗಳೂರು, ಗೋವಾದಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಆಭರಣದಲ್ಲಿ ನವರಾತ್ರಿ ಪ್ರಯುಕ್ತ ಪ್ರತೀ ಗ್ರಾಂ ಬಂಗಾರದ ಮೇಲೆ 100 ರೂ. ಕ್ಯಾಶ್ಬ್ಯಾಕ್ ಆಫರ್ ಹಮ್ಮಿಕೊಳ್ಳಲಾಗಿದೆ. ಬೆಳ್ಳಿ ಹಾಗೂ ಡೈಮಂಡ್ ಆಭರಣಗಳ ಮೇಲೆ ವಿಶೇಷ ರಿಯಾಯಿತಿ ಕೊಡುಗೆಗಳಿವೆ.
ನವರಾತ್ರಿ ಪ್ರಯುಕ್ತ ಗ್ರಾಹಕರ ಅನುಕೂಲಕ್ಕಾಗಿ ರವಿವಾರವೂ ಆಭರಣ ಜುವೆಲರ್ಸ್ನ ಎಲ್ಲಾ ಶಾಖೆಗಳು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರ ವರೆಗೆ ತೆರೆದಿರುತ್ತದೆ. ಆಭರಣ ಜುವೆಲರ್ಸ್ನಲ್ಲಿ ದೈವ, ದೇವಸ್ಥಾನಗಳಲ್ಲಿ ಬಳಸುವ ಚಿನ್ನ, ಬೆಳ್ಳಿಯ ಸಾಮಾಗ್ರಿಗಳಾದ ಪೀಠ, ಪ್ರಭಾವಳಿ, ಪಲ್ಲಕ್ಕಿ, ಮಂಟಪ, ರಥ ಇತ್ಯಾದಿಗಳನ್ನು ತಯಾರಿಸಿ ಕೊಡಲಾಗುವುದು ಎಂದು ಸಂಸ್ಥೆಯ ಪತ್ರಿಕಾ ಪ್ರಕಟನೆ ತಿಳಿಸಿದೆ.