ಸುಳ್ಯ : ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಶಿಬರಿಕಲ್ಲ ಮಾಡ ಶ್ರೀ ಮಲರಾಯ ಮೂವರ್ ದೈವಂಗಳ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶ ಫೆ. 5ರಿಂದ 23 ತನಕ ನಡೆಯಲಿದ್ದು, ಜೀರ್ಣೋದ್ಧಾರ ಕಾರ್ಯದ ಸಂಪೂರ್ಣ ಚಿತ್ರಣವನ್ನು ದೇವಸ್ಥಾನದ ಸಂಘಟಕರ ವತಿಯಿಂದ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಸಾಕ್ಷ್ಯಾಚಿತ್ರ ಪ್ರದರ್ಶಿಸುವ ಮೂಲಕ ಮಾಹಿತಿ ಹಂಚಿಕೊಳ್ಳಲಾಯಿತು.
ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೆ.ಟಿ. ವೆಂಕಟೇಶ್ವರ ನೂಜಿ ಮಾಹಿತಿ ನೀಡಿ, ಗ್ರಾಮದಲ್ಲಿರುವ 1260 ಮನೆಗಳನ್ನು ಭೇಟಿ ಮಾಡಲಾಗಿದೆ. ದೇವಸ್ಥಾನದ ಜ್ಯೋತಿಯಿಂದ ಪ್ರತಿ ಮನೆಯಲ್ಲೂ ಅರ್ಚಕರು ಜ್ಯೋತಿ ಬೆಳಗಿಸಿ, ಮನೆಯ ದೀಪದೊಂದಿಗೆ ವಿಲೀನಗೊಳಿಸಿ, ಪುನಃ ದೇವಸ್ಥಾನಕ್ಕೆ ಜ್ಯೋತಿಯನ್ನು ತಂದು ವಿಲೀನಗೊಳಿಸಲಾಯಿತು. ಪ್ರತಿ ಮನೆಯೂ ಬೆಳಗಬೇಕು ಎಂಬ ಸಂಕಲ್ಪದೊಂದಿಗೆ ಎಲ್ಲರೂ ಸೇರಿ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಗ್ರಾಮಸ್ಥರೇ ಸುಮಾರು 3 ಕೋಟಿ ರೂ. ಸಂಗ್ರಹಿಸಿ, ದೇವಸ್ಥಾನ ನಿರ್ಮಾಣ ಮಾಡಿದ್ದಾರೆ ಎಂದರು. ಪ್ರತಿ ದಿನನಡೆಯುವ ಧರ್ಮಸಭೆಯಲ್ಲಿ ತುಳುನಾಡಿನ ಹೆಸರಾಂತ ಅರಸು ಮನೆತನದವರು ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಕಲ್ಯಾಣಾರ್ಥ ನಾಡಿನ ವಿಧ್ವಜ್ಜ ನರಿಂದ ವೇದ ಪಾರಾಯಣಗಳು ಹಾಗೂ ದೈವಜ್ಞರ ಮಾರ್ಗದರ್ಶನದಂತೆ ಹವನ, ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಬ್ರಹ್ಮಕಲಶದ ಸಂಪೂರ್ಣ ಮಾಹಿ ಞತಿಯುಳ್ಳ “ಹರಿವಾಣಿ’ ಆಮಂತ್ರಣವನ್ನು ಗ್ರಾಮದ ಪ್ರತಿ ಮನೆಗೂ ತಲುಪಿಸ ಲಾಗಿದೆ ಎಂದು ಮಾಹಿತಿ ನೀಡಿದರು.
ಬ್ರಹ್ಮಕಲಶ ಸಮಿತಿ ಸಂಘಟನ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಚಾರ ಸಮಿತಿ ಸಂಚಾಲಕ ಉಮೇಶ್ ಹಡೀಲು, ಹರೀಶ್ ನೀರಕೋಡಿ, ಜನಾರ್ದನ ಕಾರ್ಯಾಡಿ, ಮನೋಜ್ ಕಂಪ, ನವೀನ್ ಹಡೀಲು, ಸುಳ್ಯ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಡಾ| ಹರಪ್ರಸಾದ್ ತುದಿಯಡ್ಕ, ತೊಡಿ ಕಾನ ಮಲ್ಲಿಕಾರ್ಜುನ ದೇವಸ್ಥಾನದ
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿವಾಕರ ರೈ ಪಿ.ಬಿ., ಉಮೇಶ್ ಪಿ.ಕೆ. ಉಪಸ್ಥಿತರಿದ್ದರು.