Home ಧಾರ್ಮಿಕ ಸುದ್ದಿ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇಗುಲ ಹಿಂದಿರುಗಿದ ಗ್ರಾಮಜ್ಯೋತಿ, ಚಪ್ಪರ ಮುಹೂರ್ತ

ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇಗುಲ ಹಿಂದಿರುಗಿದ ಗ್ರಾಮಜ್ಯೋತಿ, ಚಪ್ಪರ ಮುಹೂರ್ತ

545
0
SHARE

ವಿಟ್ಲಮುಟ್ನೂರು : ವಿಟ್ಲ ಮುಟ್ನೂರು ಗ್ರಾಮದ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶದ ಅಂಗವಾಗಿ ಗ್ರಾಮ ಜ್ಯೋತಿಯು ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ವಾಹನ ಜಾಥಾದ ಮೂಲಕ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಾನಕ್ಕೆ ಗುರುವಾರ ಹಿಂದಿರುಗಿದೆ. ಶ್ರೀ ದೇವರಿಗೆ ಮಹಾಪೂಜೆ ನಡೆದ ಬಳಿಕ ಬ್ರಹ್ಮಕಲಶದವರೆಗಿನ ಮುಂದಿನ 48 ದಿನಗಳ ಕಾಲ ಗ್ರಾಮಸ್ಥರೆಲ್ಲರೂ ವ್ರತನಿಷ್ಠರಾಗುವುದು ಎಂದು ಸಂಕಲ್ಪ ಮಾಡಲಾಯಿತು.

ಚಪ್ಪರ ಮುಹೂರ್ತ
ಚಪ್ಪರ ಮುಹೂರ್ತ ಕಾರ್ಯವು ಶುಭ ಮುಹೂರ್ತದಲ್ಲಿ ನೆರವೇರಿತು. ವಿಟ್ಲಮುಟ್ನೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಪ್ರೇಮಲತಾ ಪಟ್ಲ ಉಪಸ್ಥಿತರಿದ್ದರು.
ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಿಟ್ಲ, ಜಯರಾಮ ಬಲ್ಲಾಳ್‌, ದೇವಸ್ಥಾನದ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೆ.ಟಿ. ವೆಂಕಟೇಶ್ವರ ನೂಜಿ, ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಮರುವಾಳ, ಸರ್ವಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here