Home ಧಾರ್ಮಿಕ ಸುದ್ದಿ ಕೊಂಡೆಯೂರು ಕ್ಷೇತ್ರದ ಜೀರ್ಣೋದ್ಧಾರ ಪೂರ್ವಭಾವಿ ಸಭೆ

ಕೊಂಡೆಯೂರು ಕ್ಷೇತ್ರದ ಜೀರ್ಣೋದ್ಧಾರ ಪೂರ್ವಭಾವಿ ಸಭೆ

1210
0
SHARE
ಜೀರ್ಣೋದ್ಧಾರ ಪೂರ್ವಭಾವಿ ಸಭೆ ನಡೆಯಿತು.

ಕುಂಬಳೆ: ವರ್ಕಾಡಿ ಪಾವೂರು ಗಡಿಪ್ರದೇಶವಾದ ಕೊಂಡೆಯೂರಿನಲ್ಲಿ ನೂರಾರು ವರ್ಷಗಳ ಇತಿಹಾಸ ವಿರುವ ಕ್ಷೇತ್ರವು ಧರಾಶಾಯಿಯಾಗಿದ್ದು ಇದರಿಂದ ಪರಿಸರದಲ್ಲಿರುವ ನಿವಾಸಿಗಳಿಗೆ ದೋಷ ಕಂಡು ಬಂದಿರುವುದರಿಂದ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸುವ ಬಗ್ಗೆ ಭಕ್ತರ ಪೂರ್ವಭಾವಿ ಸಭೆ ಕ್ಷೇತ್ರದ ವಠಾರದಲ್ಲಿ ಜರಗಿತು. ವರ್ಕಾಡಿ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ದೇವಪ್ಪ ಶೆಟ್ಟಿ ಚಾವಡಿ ಬೈಲುಗುತ್ತು ಅಧ್ಯಕ್ಷತೆ ವಹಿಸಿದರು.

ಸಭೆಯಲ್ಲಿ ಗಣ್ಯರಾದ ರಾಮಣ್ಣ ಶೆಟ್ಟಿ ಅಲದಗುತ್ತು, ಸುಧಾಕರ ಪೂಜಾರಿ ಕೊಡ್ಲಮೊಗರು, ರಾಮಕೃಷ್ಣ ರೈ ಕರುಮೊಗೇರು, ಚಂದ್ರಹಾಸ ಪೂಜಾರಿ ಮುಡಿಮಾರು, ಐತ್ತಪ್ಪ ಶೆಟ್ಟಿ ದೇವಂದ ಪಡ್ಪು, ಅರಸ ಪೂಜಾರಿ ಕುದುಕೋರಿ, ಗಣೇಶ್‌ ಚೆಂಡೇಲ್, ಪದ್ಮನಾಭ ಅಡ್ಯಂತಾಯ, ರವಿ ಮುಡಿಮಾರು, ಮಾಧವ ಪೂಜಾರಿ ಕುದುಕೋರಿ, ಅರುಣ್‌ ಕುಮಾರ್‌ ಶೆಟ್ಟಿ ಮೊದಲಾದವರು ಭಾಗವಹಿಸಿ ಮಾತನಾಡಿದರು. ಸಭೆಯಲ್ಲಿ ಮುಂದೆ ಅಷ್ಟ ಮಂಗಳ ಪ್ರಶ್ನೆಯನ್ನು ಈ ಸ್ಥಳದಲ್ಲಿರಿಸಿ ಅದರ ಪ್ರಕಾರ ಮುಂದಿನ ಕೆಲಸ ಕಾರ್ಯಗಳನ್ನು ಮಾಡುವುದೆಂದು ತೀರ್ಮಾನಿಸಲಾಯಿತು.

ನೂತನ ಸಮಿತಿಯನ್ನು ರಚಿಸಲಾ ಯಿತು. ಗೌರವಾಧ್ಯಕ್ಷರಾಗಿ ಶ್ರೀ ಯೋಗಾ ನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಉಪ್ಪಳ, ಅಧ್ಯಕ್ಷರಾಗಿ ದೇವಪ್ಪ ಶೆಟ್ಟಿ ಚಾವಡಿ ಬೈಲುಗುತ್ತು, ಕಾರ್ಯಾಧ್ಯಕ್ಷರಾಗಿ ಐತ್ತಪ್ಪ ಶೆಟ್ಟಿ ದೇವಂದಪಡ್ಪು, ಉಪಾಧ್ಯಕ್ಷರಾಗಿ ಪದ್ಮನಾಭ ಅಡ್ಯಂತಾಯ ಕಾಪು, ಗಣೇಶ್‌ ಚೆಂಡೇಲ್, ಅರುಣ್‌ ಕುಮಾರ್‌ ಶೆಟ್ಟಿ, ಚಂದ್ರಹಾಸ ಮುಡಿಮಾರು, ಸುಧಾಕರ ಪೂಜಾರಿ ಕೊಡ್ಲಮೊಗರು, ಪ್ರಭಾಕರ ಶೆಟ್ಟಿ ಕಲ್ಪನೆ, ದಿನೇಶ್‌ ಕರ್ಕೆರ ಮುಡಿಮಾರು, ವಿವೇಕಾನಂದ ಶೆಟ್ಟಿ ವರ್ಕಾಡಿ, ಪ್ರಧಾನ ಕಾರ್ಯದರ್ಶಿಯಾಗಿ ರವಿ ಮುಡಿಮಾರು, ಜತೆ ಕಾರ್ಯದರ್ಶಿಗಳಾಗಿ ನಾಗೇಶ್‌ ಬಳ್ಳೂರು, ನವೀನ್‌ ಶೆಟ್ಟಿ ದಡ್ಡಂಗಡಿ, ನವೀರಾಜ್‌ ಮುಡಿಮಾರು, ಹರ್ಷಿತ್‌ ಶೆಟ್ಟಿ, ಮನೋಜ್‌ ಕುಮಾರ್‌ ಕೊಪ್ಪಳ, ಪ್ರಶಾಂತ್‌ ಚಾವಡಿ ಬೈಲು, ಕೋಶಾಧಿಕಾರಿಯಾಗಿ ಜಯ ಪ್ರಕಾಶ್‌ ಅಡ್ಯಂತಾಯ, ಜತೆ ಕೋಶಾಧಿಕಾರಿ ಯಾಗಿ ದೇವದಾಸ್‌ ಶೆಟ್ಟಿ, ಪ್ರಧಾನ ಸಂಚಾಲಕರಾಗಿ ವಿನೋದ್‌ ಕುಮಾರ್‌ ರೆಂಜೆಪಡ್ಪು ಅವರನ್ನು ಆರಿಸಲಾಯಿತು. 12 ಮಂದಿ ಗೌರವ ಸಲಹೆಗಾರರು 71 ಸಮಿತಿ ಸದಸ್ಯರನ್ನು ಆರಿಸಲಾಯಿತು.

ಮಹಿಳಾ ಸಮಿತಿಯ ಅಧ್ಯಕ್ಷೆಯಾಗಿ ಶಶಿಕಲಾ ಡಿ. ಶೆಟ್ಟಿ ಕೆದುಂಬಾಡಿ, ಉಪಾ ಧ್ಯಕ್ಷೆಯಾಗಿ ಉಷಾ ಪೆರ್ಮನಂಜೆ, ಸೀತಾ ಲಕ್ಷ್ಮೀ ಪೆರ್ಮನಂಜೆ, ಹೇಮಲತಾ ಐತ್ತಪ್ಪ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ದೀಕ್ಷಾ ಎಸ್‌. ಕರ್ಕೆರ ಮುಡಿಮಾರು, ಜತೆ ಕಾರ್ಯದರ್ಶಿಯಾಗಿ ವನಜಾಕ್ಷಿ, ಮಮತಾ ಅಡ್ಯಂತಾಯ ಕಾವು ಅಲ್ಲದೇ 47 ಮಂದಿ ಮಹಿಳಾ ಸದಸ್ಯೆಯರನ್ನಾಗಿ ನೇಮಿಸಲಾಯಿತು. ದೇವಪ್ಪ ಶೆಟ್ಟಿ ಸ್ವಾಗತಿಸಿದರು. ರವಿ ಮುಡಿಮಾರು ವಂದಿಸಿದರು.

LEAVE A REPLY

Please enter your comment!
Please enter your name here