Home ಧಾರ್ಮಿಕ ಸುದ್ದಿ ಕುಂಬ್ಲಾಡಿ ದೇವಸ್ಥಾನ: ಪುನರ್‌ ಪ್ರತಿಷ್ಠಾಪನೆ ವಾರ್ಷಿಕೋತ್ಸವ

ಕುಂಬ್ಲಾಡಿ ದೇವಸ್ಥಾನ: ಪುನರ್‌ ಪ್ರತಿಷ್ಠಾಪನೆ ವಾರ್ಷಿಕೋತ್ಸವ

1400
0
SHARE

ಕಾಣಿಯೂರು: ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ಪುನರ್‌ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಜ. 28, 29ರಂದು ನಡೆಯಿತು. ಬ್ರಹ್ಮಶ್ರೀ ವೇ| ಮೂ| ನೀಲೇಶ್ವರ ಪದ್ಮನಾಭ ತಂತ್ರಿ ಉಚ್ಚಿಲ ಇವರ ನೇತೃತ್ವದಲ್ಲಿ ನಡೆದ ದೇವರ ಪುನರ್‌ ಪ್ರತಿಷ್ಠಾಪನಾ ವಾರ್ಷಿಕೋತ್ಸವದಲ್ಲಿ ಜ. 28ರಂದು ಬೆಳಗ್ಗೆ ಅರುವಗುತ್ತು ಮನೆಯಿಂದ ದೇವರ ಆಭರಣ ತಂದು, ನಾಲ್ಕಂಬ ಉಳ್ಳಾಲ್ತಿ ಕ್ಷೇತ್ರದಲ್ಲಿ ಪ್ರಾರ್ಥನೆ, ದೇಗುಲದಲ್ಲಿ ತೋರಣ ಮೂಹುರ್ತ, ಅಂಕದ ಕೂಟೇಲಿನಲ್ಲಿ ಪ್ರತಿಷ್ಠಾಪನಾ ನಿಮಿತ್ತ ಗಣಹೋಮ, ಪ್ರಾರ್ಥನೆ, ಮಧ್ಯಾಹ್ನ ದೇವರ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ತಂತ್ರಿವರ್ಯರ ಆಗಮನ, ಸ್ವಾಗತ, ರಾತ್ರಿ ವೈದಿಕ ಕಾರ್ಯಕ್ರಮ, ಪ್ರಾಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ, ರಾತ್ರಿ ಪೂಜೆ, ಅನ್ನಸಂತರ್ಪಣೆ ನಡೆಯಿತು.

ಬಳಿಕ ಮಾಧವ ಕೆ.ವಿ., ಜಯಂತ ಅಂಬುಲ, ವಿಜೇತ್‌ ಮಾಚಿಲ ಇವರ ನೇತೃತ್ವದಲ್ಲಿ ನಾಣಿಲ ಸ.ಹಿ.ಪ್ರಾ. ಶಾಲೆ ಮತ್ತು ಕೊಪ್ಪ ಸ.ಕಿ.ಪ್ರಾ.ಶಾಲೆ ಹಾಗೂ ನಾಣಿಲ, ಕೊಪ್ಪ, ಮುದುವ ಅಂಗನವಾಡಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಸಭೆಯ ಅಧ್ಯಕ್ಷತೆಯನ್ನು ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋನಪ್ಪ ಉಳವ ವಹಿಸಿದ್ದರು. ಆಡಳಿತ ಪಂಗಡದ ಸಂಚಾಲಕ ಮೋನಪ್ಪ ಗೌಡಮನೆ, ಕಾರ್ಯದರ್ಶಿ ಕೆ.ಎನ್‌. ಮೋಹನ ಗೌಡ ಖಂಡಿಗ, ಕೋಶಾಕಾರಿ ರಾಮಯ್ಯ ಗೌಡ, ಉಪಕಾರ್ಯದರ್ಶಿ ಶಿವರಾಮ ಗೌಡ ಚೊಕ್ಕಾಡಿ, ಉಪಸಂಚಾಲಕ ಜಯರಾಮ್‌ ಕೊಪ್ಪ ಚವರನ್ನು ಸಮ್ಮಾನಿಸಲಾಯಿತು.

ಶ್ರೀ ನಾಲ್ಕಂಭ ಉಳ್ಳಾಲ್ತಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವೆಂಕಪ್ಪ ಗೌಡ ಮಾಚಿಲ ಮಾತನಾಡಿ, ಶ್ರೀಉಳ್ಳಾಲ್ತಿ ಮೂಲ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಊರಿನ ಸಮಸ್ತರ ಸಹಾಯದಿಂದ ಶೀಘ್ರ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡು ಬ್ರಹ್ಮಕಲಶಕ್ಕೆ ಅಣಿಯಾಗಬೇಕಾಗಿದೆ ಎಂದರು.

ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷೆ ಸಿ.ಜೆ. ಚಂದ್ರಕಲಾ ಅರುವಗುತ್ತು, ಮೊಕ್ತೇಸರ ನಾರ್ಣಪ್ಪ ಗೌಡ ಮಾಚಿಲ, ಉಪಾಧ್ಯಕ್ಷ ಪ್ರವೀಣ್‌ ಕುಂಟ್ಯಾನ, ಕಾರ್ಯದರ್ಶಿ ವಿಶ್ವನಾಥ ಅಂಬುಲ, ವ್ಯವಸ್ಥಾಪನ ಸಮಿತಿ ಸದಸ್ಯರಾದ ವೆಂಕಪ್ಪ ಕಂಪ, ನಾರಾಯಣ ಗೌಡ, ದೇವಣ್ಣ ಗೌಡ ಅಂಬುಲ, ತನಿಯ ಕುಂಬ್ಲಾಡಿ, ಭಾಗೀರಥಿ ಕುಂಬ್ಲಾಡಿ, ವನಿತಾ ಕುಂಬ್ಲಾಡಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ವಿಶ್ವನಾಥ ಅಂಬುಲ ಸ್ವಾಗತಿಸಿ, ವಿಜೇತ್‌ ಮಾಚಿಲ ವಂದಿಸಿದರು. ಮಾಧವ ಕೆ.ವಿ ಕಾರ್ಯಕ್ರಮ ನಿರೂಪಿಸಿದರು.

ಜ. 29ರಂದು ಬೆಳಗ್ಗೆ ಗಣಪತಿ ಹೋಮ, ಬಿಂಬ ಶುದ್ಧಿ, ಕಲಶ ಪೂಜೆ, ಪ್ರಸಾದ ವಿತರಣೆ, ದೇವರ ಕೆರೆಯಿಂದ ಪವಿತ್ರ ಜಲ ತಂದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಆಶ್ಲೇಷಬಲಿ ಪೂಜೆ, ರಾತ್ರಿ ರಂಗಪೂಜೆ, ಶ್ರೀ ದೇವರ ಭೂತ ಬಲಿ, ನೃತ್ಯಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ನಾಲ್ಕಂಬ ಶ್ರೀ ಉಳ್ಳಾಲ್ತಿ ಕ್ಷೇತ್ರದಲ್ಲಿ ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ, ಪ್ರಸಾದ ವಿತರಣೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಿತು. ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ನೂತನ ಆಡಳಿತ ಪಂಗಡದ ಪದಾಧಿಕಾರಿಗಳಿಗೆ ಅಭಿನಂದಿಸಲಾಯಿತು.

ಆಶ್ಲೇಷಬಲಿ ಪೂಜೆ

LEAVE A REPLY

Please enter your comment!
Please enter your name here