Home ಧಾರ್ಮಿಕ ಸುದ್ದಿ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕನಿಗೆ 21 ಸಾವಿರ ತೆಂಗಿನ ಕಾಯಿ ಮೂಡುಗಣಪತಿ ಪೂಜೆ

ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕನಿಗೆ 21 ಸಾವಿರ ತೆಂಗಿನ ಕಾಯಿ ಮೂಡುಗಣಪತಿ ಪೂಜೆ

938
0
SHARE

ತೆಕ್ಕಟ್ಟೆ: ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಳದ ಸನ್ನಿಧಿಯಲ್ಲಿ ಸುಮಾರು 21 ಸಾವಿರ ತೆಂಗಿನಕಾಯಿಯ ಮೂಡುಗಣಪತಿ ಸೇವೆಯನ್ನು ಅಮೇರಿಕಾದ ಮೇಜರ್ ಡಾ ಪ್ರವರ್ಧನ್ ಬಿರ್ತಿ ಹಾಗೂ ವಂದನಾ ಬಿರ್ತಿ ದಂಪತಿಗಳು ಡಿ.24 ರಂದು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕಳೆದ ಹಲವು ದಿನಗಳಿಂದಲೂ ಮೂಡುಗಣಪತಿ ಸೇವೆಗಾಗಿ ಸುಮಾರು 21 ಸಾವಿರ ತೆಂಗಿನ ಕಾಯಿ ಸಂಗ್ರಹ ಹಾಗೂ ಅದಕ್ಕೆ ಪೂರಕವಾದ ಇತರೆ ತಯಾರಿಗಳು ದೇವಳದಲ್ಲಿ ನಿರಂತರವಾಗಿ ನಡೆದಿದೆ. ಸುಮಾರು 21 ಸಾವಿರ ಕಾಯಿಯ ವೆಚ್ಚವೇ ಸರಿ ಸುಮಾರು ರೂಪಾಯಿ 5ಲಕ್ಷಕ್ಕೂ ಅಧಿಕವಾಗಿದೆ. ಸುಮಾರು 21 ಬಾಳೆಗೊನೆ, 21 ಕಟ್ಟು ವೀಳ್ಯದೆಲೆ, 900 ಅಡಿಕೆ , ಹೂ ಹಣ್ಣು ಸೇರಿದಂತೆ ಇತರೆ ಖರ್ಚುಗಳು ಸರಿ ಸುಮಾರು ಲಕ್ಷಕ್ಕೂ ಅಧಿಕ ಮೊತ್ತ ಎಂದು ಹೇಳಲಾಗಿದೆ.

ಸಾವಿರಾರು ತೆಂಗಿನ ಕಾಯಿಯನ್ನು ಒಡೆಯಲು ಪರಿಸರದ ನುರಿತ 20ಕ್ಕೂ ಅಧಿಕ ಮಂದಿ ತಮ್ಮನ್ನು ತಾವು ತೊಡಗಿಸಿಕೊಂಡು ಕೇವಲ 3 ಗಂಟೆಯ ಅವಧಿಯಲ್ಲಿ ತೆಂಗಿನ ಕಾಯಿ ಒಡೆಯುವ ಕಾರ್ಯವನ್ನು ಪೂರ್ಣಗೊಳಿಸಿರುವುದು ವಿಶೇಷ.

ಈ ಸಂದರ್ಭದಲ್ಲಿ ಹಿರಿಯ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ದೇವಳದ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ, ಕೆ.ಶ್ರೀಧರ ಉಪಾಧ್ಯಾಯ, ಮೆನೇಜರ್ ನಟೇಶ್ ಕಾರಂತ್ ತೆಕ್ಕಟ್ಟೆ, ಪರ್ಯಾಯ ಅರ್ಚಕ ಚಂದ್ರಕಾಂತ್ ಉಪಾಧ್ಯಾಯ, ದೇವಳದ ಅರ್ಚಕರು ಮತ್ತು ಸಿಬಂದಿ ವರ್ಗ ಹಾಗೂ ಸದ್ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here