ಕುಂಬಳೆ : ತೃಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ಕ್ಷೇತ್ರದ ಪುನಃಪ್ರತಿಷ್ಠಾ ಬ್ರಹ್ಮಲಶೋತ್ಸ ವದ ಆರನೇ ದಿನವಾದ ಬುಧವಾರ ಬೆಳಗ್ಗೆ ಗಣಪತಿ ಹೋಮ, ಮುಳ ಪೂಜೆ, ಪ್ರಾಸಾದ ಪ್ರತಿಷ್ಠೆಯ ಬಳಿಕ ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರೀ ತ್ರಯಂಬಕೇಶ್ವರ ಸಾನಿಧ್ಯ ಪುನಃ ಪ್ರತಿಷ್ಠೆ ನೆರವೇರಿಸಲಾಯಿತು.
ಬಳಿಕ ಪರಾವಾಹನ, ಅವಸ್ಟಾ ವಾಹನ, ಅಷ್ಟಬಂಧ ಕ್ರಿಯೆ, ಜೀವಾವಾಹನ, ಜೀವಕಲಶಾಭಿಷೇಕ, ಪ್ರತಿಷ್ಠಾ ಪೂಜೆ ಪ್ರತಿಷ್ಠಾ ಬಲಿ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮ ದಂಗವಾಗಿ ಬೆಂಗಳೂರು ಕಾಂಚನ ಸಹೋದರಿಯರಿಂದ ಸಂಗೀತ ಕಛೇರಿ, ಮಧ್ಯಾಹ್ನ ಸಾರ್ವಜನಿಕ ಅನ್ನದಾನ, ನಿತ್ಯ ನೈಮಿತ್ಯಾದಿಗಳ ಪುನರ್ ನಿಶ್ಚಯ, ಭದ್ರದೀಪ ಪ್ರತಿಷ್ಠೆ, ದ್ವಾರ ಬಂಧನ, ಮಂಟಪ ಪೂಜೆ ಇತ್ಯಾದಿ ನಡೆದವು. ಸಂಜೆ ಭಜನೆ, ರಾತ್ರಿ ಮಲ್ಲ ಶ್ರೀ ದುರ್ಗಾಪರಮೆಶ್ವರೀ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ನಡೆಯಿತು.