ಕುಂಬಳೆ: ಕಳೆದ ಜ. 14ರಂದು ಆರಂಭಗೊಂಡ ಸೀಮೆಯ ಪ್ರಥಮ ಉತ್ಸವವಾದ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಜಾತ್ರೆಯು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿ ಜ. 19ರಂದು ಸಂಪನ್ನಗೊಂಡಿತು.
ಕೊನೆಯ ದಿನವಾದ ಶುಕ್ರವಾರ ಬೆಳಗ್ಗೆ ಶ್ರೀ ದೇವರಿಗೆ ಪಂಚಾಮೃತ ಮತ್ತು ಎಳನೀರು ಅಭಿಷೇಕ ನಡೆಯಿತು. ಮಧ್ಯಾಹ್ನ ಮಹಾಪೂಜೆ, ದೇವರ ಶ್ರೀ ಬಲಿಯ ಬಳಿಕ ಊರ ಹತ್ತು ಸಮಸ್ತರಿಂದ ಅನ್ನ ಸಂತರ್ಪಣೆ ನಡೆಯಿತು. ಸಂಜೆ ದೀಪಾರಾಧನೆ, ಭಜನೆ, ರಾತ್ರಿ ಮಹಾಪೂಜೆ, ಉತ್ಸವ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದದೊಂದಿಗೆ ಉತ್ಸವ ಸಂಪನ್ನಗೊಂಡಿತು.