Home ಧಾರ್ಮಿಕ ಕಾರ್ಯಕ್ರಮ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

ಬುಡ್ರಿಯ ಮಲರಾಯ ಬಂಟ ದೈವಸ್ಥಾನ ಬ್ರಹ್ಮಕಲಶ

1302
0
SHARE
ಕುದ್ದುಪದವು ಕೊರತಿ ಗುಳಿಗ ದೈವ ಕ್ಷೇತ್ರದ ಮೂಲಕ ಬುಡ್ರಿಯ ಕ್ಷೇತ್ರದವರೆಗೆ ಹೊರೆಕಾಣಿಕೆ ಮೆರವಣಿಗೆಜರಗಿತು

ಕುಂಬಳೆ: ಬುಡ್ರಿಯ ತೊಟ್ಟೆತ್ತೋಡಿ ಶ್ರೀ ಮಲರಾಯ ಬಂಟ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕೈಗೊಂಡು ದೈವಗಳ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಸಮಾರಂಭದ ಪೂರ್ವಭಾವಿಯಾಗಿ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಕುದ್ದುಪದವು ಶ್ರೀ ಕೊರತಿ ಗುಳಿಗ ದೈವ ಕ್ಷೇತ್ರದ ಮೂಲಕ ಬುಡ್ರಿಯ ಶ್ರೀ ಕ್ಷೇತ್ರದವರೆಗೆ ನೂರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆಯಲ್ಲಿ ವಿಜೃಂಭಣೆಯಿಂದ ಜರಗಿತು.

ಜೀಣೋದ್ಧಾರ ಸಮಿತಿ ಅಧ್ಯಕ್ಷ ಲೀಲಾಕ್ಷ ಸಾಮಾನಿ ದೇರಂಬಳ ಅವರ ನೇತೃತ್ವದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು.

ಸಭೆಯಲ್ಲಿ ವೇ| ಮೂ| ಗಣೇಶ ನಾವಡ ಚಿಗುರುಪಾದೆ ಅವರು ಶುಭಹಾರೈಸಿದರು. ಜೀರ್ಣೋದ್ಧಾರ ಸಮಿತಿಗೆ ಗೌರವಾಧ್ಯಕ್ಷೆ ಪ್ರೇಮಾ ಕೆ.ಭಟ್ ತೊಟ್ಟೆತ್ತೋಡಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ, ಗೋವಿಂದ ಹೆಗ್ಡೆ ಬೆಜ್ಜ, ಕರುಣಾಕರ ರೈ ಕಳ್ಳಿಗೆ ಬೀಡು, ದಿನೇಶ ಬುಡಾಲೆ ಗುಂಡಿಬೈಲು, ಶ್ರೀಧರ ರಾವ್‌ ಮೀಯಪದವು, ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಗೋಪಾಲಕೃಷ್ಣ ಪೂಜಾರಿ ಚಿಗುರುಪಾದೆ, ಶಂಕರನಾರಾಯಣ ಭಟ್ ಮುಂದಿಲ, ಮೋನಪ್ಪ ಪೂಜಾರಿ ಕಲ್ಕಾರು ಚಿನಾಲ ಮೊದಲಾದವರು ಭಾಗವಹಿಸಿದ್ದರು. ವಸಂತ ಭಟ್ ತೊಟ್ಟೆತ್ತೋಡಿ, ತ್ಯಾಂಪಣ್ಣ ಶೆಟ್ಟಿ ದೇರಂಬಳ, ನಾರಾಯಣ ನಾೖಕ್‌ ನಡುಹಿತ್ಲು ಕುಳೂರು, ವಾಮಯ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಡಿ.ಸದಾಶಿವ ರಾವ್‌ ಚಿಗುರುಪಾದೆ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ|ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ಲಕ್ಷ್ಮೀಶ ಮಿತ್ತಾಳ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಅಶ್ವಿ‌ನಿ ಕಲ್ಲಗದ್ದೆ ವಂದಿಸಿದರು.

LEAVE A REPLY

Please enter your comment!
Please enter your name here