ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಚತುರ್ಥ ದಿನವಾದ ಜ. 17ರಂದು ಬೆಳಗ್ಗೆ ಉತ್ಸವ ಶ್ರೀ ಭೂತಬಲಿ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆಯ ಬಳಿಕ ಮಡ್ವ ಚಂದ್ರಹಾಸ ಭಂಡಾರಿ ಮನೆಯವರಿಂದ ಅನ್ನದಾನ ನಡೆಯಿತು.
ಸಂಜೆ ನಡೆ ತೆರೆದ ಬಳಿಕ ಶಿರಿಯ ಶ್ರೀ ಸತ್ಯಸಾಯಿ ಬಳಗದಿಂದ ಭಜನೆ, ನಾಟ್ಯನಿಲಯಂ ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯರಿಂದ ಭರತ ನಾಟ್ಯ ರಂಜಿಸಿತು.
ಸಂಜೆ ತಾಯಂಬಕ, ದೀಪಾರಾಧನೆ, ರಾತ್ರಿ ಶ್ರೀಬಲಿ ಉತ್ಸವ, ಬೆಡಿ ಪ್ರದರ್ಶನ ನಡೆಯಿತು. ಮುಂಜಾನೆ ಶಯನ, ಕವಾಟ ಬಂಧನ ನಡೆಯಿತು