ಕುಂಬಳೆ: ಮಂಜೇಶ್ವರ ಹೊಸ ಬೆಟ್ಟು ಪೊಕ್ಕಿಮಲೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ನೂತನ ಗರ್ಭಗುಡಿಯಲ್ಲಿ ಶ್ರೀ ಮಾತೆಯ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ವೇ|ಮೂ| ಬ್ರಹ್ಮ ಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜೂ. 18ರಿಂದ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿತು.
ಪ್ರಥಮ ದಿನವಾದ ಸೋಮವಾರ ಸಂಜೆ ಮಂಜೇಶ್ವರ ಹೊಸಬೆಟ್ಟು ಕುಲಾಲ ಮಂದಿರ ಪರಿಸರದಿಂದ ಶ್ರೀ ಕ್ಷೇತ್ರಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ವಾದ್ಯಘೋಷದೊಂದಿಗೆ ನಡೆಯಿತು. ಬಳಿಕ ಬ್ರಹ್ಮಶ್ರೀ ಬಡಾಜೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ವಾಚನ, ವೈದಿಕ ಕಾರ್ಯಕ್ರಮಗಳು ಜರಗಿದುವು. ರಾತ್ರಿ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.
ಜೂ.19ರಂದು ಬೆಳಗ್ಗೆ ಶ್ರೀ ಮಹಾ ಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ ನಡೆಯಿತು. ಅಪರಾಹ್ನ ನೃತ್ಯ ವೈವಿಧ, ಸಂಜೆ ಧರ್ಮ ಸಂಸತ್ ಸಭಾ
ಕಾರ್ಯಕ್ರಮದಲ್ಲಿ ಯತಿವರೇಣ್ಯರು, ಧಾರ್ಮಿಕ, ಸಾಮಾಜಿಕ ನಾಯಕರು ಭಾಗವಹಿಸಿದರು. ರಾತ್ರಿ ಮಸ್ಕಿರಿ ಕುಡ್ಲ ತಂಡದಿಂದ ತೆಲಿಕೆ ಬಂಜಿ ನಿಲಿಕೆ ಕಾರ್ಯಕ್ರಮ ಮನರಂಜಿಸಿತು.
ಸಮಾರಂಭದಲ್ಲಿ ಬಡಾಜೆ ಶ್ರೀ ಗೋಪಾಲಕೃಷ್ಣ ತಂತ್ರಿ, ವಾಸ್ತುಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕ, ಕಾಷ್ಠಶಿಲ್ಪಿ ದಾಮೋದರ ಆಚಾರ್ಯ, ಶಿಲಾ ಶಿಲ್ಪಿ ಕುಮಾರನ್ ಮೇಸ್ತ್ರಿ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ಮತ್ತು ಮಂಗಳೂರು ರವೀಂದ್ರ ಪ್ರಭು ಬಳಗದಿಂದ ರಸಮಂಜರಿ ಕಾರ್ಯಕ್ರಮ
ಜರಗಲಿದೆ.