Home ಧಾರ್ಮಿಕ ಸುದ್ದಿ ಪೊಕ್ಕಿಮಲೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ: ಪ್ರತಿಷ್ಠೆ ,ಬ್ರಹ್ಮಕಲಶ ಸಂಪನ್ನ

ಪೊಕ್ಕಿಮಲೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ: ಪ್ರತಿಷ್ಠೆ ,ಬ್ರಹ್ಮಕಲಶ ಸಂಪನ್ನ

1820
0
SHARE
ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರಿಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಕುಂಬಳೆ: ಮಂಜೇಶ್ವರ ಹೊಸಬೆಟ್ಟು ಪೊಕ್ಕಿಮಲೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ನೂತನ ಗರ್ಭಗುಡಿಯಲ್ಲಿ ಶ್ರೀ ಮಾತೆಯ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕವು ವೇ|ಮೂ| ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿ ಸಂಪನ್ನಗೊಂಡಿತು.

ಕೊನೆಯ ದಿನದಂದು ಜರಗಿದ ಧಾರ್ಮಿಕ
ಸಭೆಯಲ್ಲಿ ಮಾಣಿಲ ಶ್ರಿಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್‌ ಶೆಟ್ಟಿ ಮಾಡ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಧಾರ್ಮಿಕ, ಸಾಮಾಜಿಕ ಮುಂದಾಳುಗಳಾದ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ವಿದ್ಯಾಧರ ಪ್ರಭು, ನ್ಯಾಯವಾದಿ ನವೀನ್‌ರಾಜ್‌ ಹೊಸಂಗಡಿ, ವಸಂತ ಉಳ್ಳಾಲ, ಪದ್ಮನಾಭ ಕಡಪ್ಪುರ, ಹರಿಶ್ಚಂದ್ರ ಮಂಜೇಶ್ವರ ಮುಂತಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕಾಷ್ಠಶಿಲ್ಪಿ ದಾಮೋದರ ಆಚಾರ್ಯ, ಶಿಲಾಶಿಲ್ಪಿ ಕುಮಾರನ್‌ ಮೇಸ್ತ್ರಿ ಅವರನ್ನು ಸಮ್ಮಾನಿಸಲಾಯಿತು. ಮತ್ತು ವಿವಿಧ ರಂಗಗಳಲ್ಲಿ ಸಾಧನೆಗೈದ ಮತ್ತು ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಜೋತಿಷಿ ರಶ್ಮಿ ಭಾಸ್ಕರ್‌, ರೇಷ್ಮಾ ಸಂತೋಷ್‌, ಸುಷ್ಮಾ ಸುನಿಲ್‌, ಚೈತ್ರಾ ಪ್ರವೀಣ್‌, ದೇವದಾಸ್‌ ಪೊಕ್ಕಿಮಲೆ, ಶಿವಪ್ರಸಾದ್‌ ಅಂಗಡಿಪದವು,ಮಾಧವಿ ನಾರಾಯಣ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಕಾರ್ಯಕರ್ತರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ನ್ಯಾಯವಾದಿ ಗಂಗಾಧರ ಕೊಂಡೆವೂರು ಸ್ವಾಗತಿಸಿದರು. ಧನ್ಯಾ ಮಾಡೂರು ವಂದಿಸಿದರು. ಬಿ.ಎಂ. ದಿನಕರ್‌ ಹೊಸಂಗಡಿ ನಿರೂಪಿಸಿದರು.

LEAVE A REPLY

Please enter your comment!
Please enter your name here