ಸುಬ್ರಹ್ಮಣ್ಯ : ಕುಲ್ಕುಂದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ 50ನೇ ವರ್ಷದ ಒತ್ತೆಕೋಲದ ಪ್ರಯುಕ್ತ ಶನಿವಾರ ರಾತ್ರಿ ನಾಲ್ಕನೇ ವರ್ಷದ ಕೊರತಿ ದೈವದ ನೇಮ ನಡೆಯಿತು. ಅನಂತರ ಅನ್ನಸಂರ್ಪಣೆ ನೆರವೇರಿತು. ವಿಟ್ಠಲ ನಾಯಕ್ ಕಲ್ಲಡ್ಕ ಮತ್ತು ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ ನೆರವೇರಿತು.
ವಿಟ್ಠಲ ನಾಯಕ್ ಅವರನ್ನು ಕಾರ್ಯಕ್ರಮದ ಶೃಂಗೇರಿ ಫ್ರೆಂಡ್ಸ್ ಕುಲ್ಕುಂದ ಕಾಲನಿ ಅವರ ವತಿಯಿಂದ ಸಮ್ಮಾನಿಸಲಾಯಿತು. ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ. ವೆಂಕಟ್ರಾಜ್, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಎನ್.ಎಸ್., ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಮಾರ್ ರುದ್ರಪಾದ ಮತ್ತು ಶೃಂಗೇರಿ ಫ್ರೆಂಡ್ಸ್ ಕುಲ್ಕುಂದ ಕಾಲನಿ ಸದಸ್ಯರು ಕಲಾವಿದರನ್ನು ಗೌರವಿಸಿದರು.
ಅನಂತರ ನಮ್ಮ ಕಲಾವಿದೆರ್ ನೆಲ್ಯಾಡಿ ಅವರಿಂದ ಹಾಸ್ಯನಾಟಕ ಗೊತ್ತಾಯೆರೆ ಬಲ್ಲಿ ಪ್ರದರ್ಶನಗೊಂಡಿತು.