Home ಧಾರ್ಮಿಕ ಸುದ್ದಿ ಕುಲ್ಕುಂದ: ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ

ಕುಲ್ಕುಂದ: ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ

1503
0
SHARE

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ 50ನೇ ವರ್ಷದ ಒತ್ತೆಕೋಲ ಶ್ರದ್ಧಾ ಭಕ್ತಿಯಿಂದ ರವಿವಾರ ನಡೆಯಿತು.

ದೈವಸ್ಥಾನದ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದ ಐದನೇ ವಾರ್ಷಿಕೋತ್ಸವ ನೆರವೇರಿತು. ಪ್ರಧಾನ ಅರ್ಚಕ ರಾಮಚಂದ್ರ ಮಣಿಯಾಣಿ ಭಕ್ತರಿಗೆ ಗಂಧ-ಪ್ರಸಾದ ನೀಡಿದರು. ಶನಿವಾರ ಸಂಜೆ ಭಂಡಾರ ತೆಗೆದ ಬಳಿಕ ಭಂಡಾರದ ಮೆರವಣಿಗೆ ದೈವಸ್ಥಾನ ದಿಂದ ಕುಲ್ಕುಂದ ತನಕ ನಡೆಯಿತು.

ಬಳಿಕ ಮೇಲೇರಿಗೆ ಅಗ್ನಿಸ್ಪರ್ಶ ಮಾಡಲಾಯಿತು. ಅಸಂಖ್ಯಾತ ಭಕ್ತರು ಮೇಲೇರಿಗೆ ಎಣ್ಣೆ ಎರಚಿ ಹರಕೆ ತೀರಿಸಿದರು. ರಾತ್ರಿ ಕುಲ್ಚಾಟ ದೈವದ ನಡಾವಳಿ ನಡೆಯಿತು. ರವಿವಾರ ಪ್ರಾತಃಕಾಲ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ನೆರವೇರಿತು. ಅನಂತರ ಮಾರಿಕಳ ನಡೆಯಿತು.

ಭಕ್ತರು ದೈವದಲ್ಲಿ ತಮ್ಮ ಅರಿಕೆಯನ್ನು ನಿವೇದಿಸಿ, ಕಾಣಿಕೆ ಅರ್ಪಿಸಿ, ಪ್ರಸಾದ ಸ್ವೀಕರಿಸಿದರು. ಅನಂತರ ಗುಳಿಗ ದೈವದ ನಡಾವಳಿ ಜರಗಿತು. ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಭಟ್‌, ಕೋಶಾಧಿಕಾರಿ ವೇಣು ಗೋಪಾಲ ಎನ್‌.ಎಸ್‌., ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ. ವೆಂಕಟ್ರಾಜ್‌, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ರಾಜೇಶ್‌ ಎನ್‌.ಎಸ್‌., ಕಾರ್ಯದರ್ಶಿ ರವೀಂದ್ರ ಕುಮಾರ್‌ ರುದ್ರಪಾದ, ಆಡಳಿತ ಮಂಡಳಿಯ ಕಾರ್ಯದರ್ಶಿ ದುಗ್ಗಪ್ಪ ನಾಯ್ಕ, ಸದಸ್ಯರಾದ ಪೆರ್ಗಡೆ ಗೌಡ, ವಿಮಲಾ ರಂಗಯ್ಯ, ಗೋಪಾಲ್‌ ಮಲೆ, ಸಂಚಾಲಕ ಹರೀಶ್‌ ಇಂಜಾಡಿ, ಸದಸ್ಯರಾದ ರಾಜೇಶ್‌ ಕಾಶಿಕಟ್ಟೆ, ನಾರಾಯಣ ಅಗ್ರಹಾರ, ಸುಬ್ಬಪ್ಪ ಶೃಂಗೇರಿ ಕಾಲನಿ, ಮಹಾಬಲ ರೈ ಕುಲ್ಕುಂದ, ರಾಜೇಶ್‌ ಕುಲ್ಕುಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here