Home ಧಾರ್ಮಿಕ ಸುದ್ದಿ ಕುಲ್ಕುಂದ: ಕಾರ್ತಿಕ ಹುಣ್ಣಿಮೆ ಗೋಪೂಜ

ಕುಲ್ಕುಂದ: ಕಾರ್ತಿಕ ಹುಣ್ಣಿಮೆ ಗೋಪೂಜ

494
0
SHARE

ಸುಬ್ರಹ್ಮಣ್ಯ: ಐತಿಹಾಸಿಕ ಕುಲ್ಕುಂದ ಜಾನುವಾರು ಜಾತ್ರೆ ನಡೆಯುವ ಕಾರ್ತಿಕ ಹುಣ್ಣಿಮೆಯ ದಿನ ಶುಕ್ರವಾರ ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದ ವಠಾರದಲ್ಲಿ ಗೋಪೂಜೆ ನಡೆಯಿತು. ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಮಹಾಪೂಜೆ ನಡೆಯಿತು. ಬಳಿಕ ಜಾನುವಾರು ಜಾತ್ರೆಯ ಪ್ರಯುಕ್ತ ಗೋಪೂಜೆಯನ್ನು ನೆರವೇರಿಸಲಾಯಿತು. ಪುರೋಹಿತ ಗಣೇಶ್‌ ಭಟ್‌ ಪೂಜೆ ನೆರವೇರಿಸಿ ಗೋಗ್ರಾಸ ನೀಡಿದರು.

ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶಿವಣ್ಣ ಗೌಡ ಜಾಡಿಮನೆ, ಸದಸ್ಯ ಚಂದ್ರಕುಮಾರ್‌ ಬಸವನಮೂಲೆ, ರವೀಂದ್ರ ರುದ್ರಪಾದ, ದಿನೇಶ್‌ ಕುಲ್ಕುಂದ,
ದಾಮೋದರ, ಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು.

ಜಾನುವಾರು ಜಾತ್ರೆ ನಡೆಯಬೇಕು ಸುಬ್ರಹ್ಮಣ್ಯ ದೇಗುಲದ ಜತೆ ಧಾರ್ಮಿಕ ಕ್ಷೇತ್ರಕ್ಕೆ ಭಾವನಾತ್ಮಕ ಬೆಸುಗೆಯನ್ನು ಹೊಂದಿದೆ. ಐತಿಹಾಸಿಕ ಪುರಾಣ ಪ್ರಸಿದ್ಧಿ ಕುಲ್ಕುಂದ ಜಾನುವಾರು ಜಾತ್ರೆ. ಪ್ರತಿವರ್ಷ ಕಾರ್ತಿಕೆ ಹುಣ್ಣಿಮೆಯ ದಿನ ಕುಲ್ಕುಂದ ಮಜಲಿನಲ್ಲಿ ಸಂಪ್ರದಾಯ ಬದ್ಧವಾಗಿ ಜಾನುವಾರು ಜಾತ್ರೆ ನಡೆಯುತಿತ್ತು.

ಕುಲ್ಕುಂದ ಜಾನುವಾರು ಜಾತ್ರೆ ನಡೆದ ಬಳಿಕವೇ ಕುಕ್ಕೆಯ ಬ್ರಹ್ಮ ರಥ ನಿರ್ಮಾಣಕ್ಕೆ ಚಾಲನೆ ಸಿಗುವುದು ಈ ಹಿಂದಿನಿಂದ ನಡೆದುಕೊಂಡು ಬಂದ ಶಿಷ್ಟಾಚಾರ. ಕೆಲ ವರ್ಷದ ಹಿಂದೆ ಮಾರಾಟ ಮತ್ತು ಖರೀದಿಯಲ್ಲಿ ಸಂಘರ್ಷ ನಡೆದು ವಿವಾದ ಏರ್ಪಟ್ಟಿತ್ತು. ವಿವಾದದಿಂದ ಜಾನುವಾರು ಜಾತ್ರೆ ಕೆಲ ವರ್ಷಗಳಿಂದ ರದ್ದಾಗಿತ್ತು. ಚಾರಿತ್ರಿಕ ಹಿನ್ನಲೆ ಇರುವ
ಜಾನುವಾರು ಜಾತ್ರೆಯನ್ನು ದೇವಸ್ಥಾನ, ಗ್ರಾ.ಪಂ. ವತಿಯಿಂದ ನಡೆಸಬೇಕು ಎನ್ನುವ ಒತ್ತಾಯವನ್ನು ಕುಲ್ಕುಂದ ಭಾಗದ ಜನತೆ ಶುಕ್ರವಾರ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here