Home ಧಾರ್ಮಿಕ ಕಾರ್ಯಕ್ರಮ ಕುಳಾಯಿ: ಶ್ರೀರಾಮೋತ್ಸವ ಆರಂಭ

ಕುಳಾಯಿ: ಶ್ರೀರಾಮೋತ್ಸವ ಆರಂಭ

1591
0
SHARE

ಕುಳಾಯಿ : ಶ್ರೀ ರಾಮನವಮಿ ಆರಾಧನ ಮಂಡಳಿ, ಕುಳಾಯಿ, ಇಲ್ಲಿ 16ನೇ ವರ್ಷದ ಶ್ರೀರಾಮೋತ್ಸವ ಬುಧವಾರ ಕುಳಾಯಿ ಮಹಿಳಾ ಮಂಡಲದ ಸಭಾಂಗಣದಲ್ಲಿ ಆರಂಭಗೊಂಡಿತು. ಶ್ರೀರಾಮೋತ್ಸವ ಮಾ. 25ರ ವರೆಗೆ ಜರಗಲಿದೆ.

ಯಕ್ಷಗಾನ ಕಲಾವಿದ, ವಾಗ್ಮಿಶ್ರೀ ಉಜಿರೆ ಅಶೋಕ್‌ ಭಟ್‌ ಕಾರ್ಯಕ್ರಮ ಉದ್ಘಾಟಿಸಿ, ರಾಮ ನವಮಿಯಂತಹ ಆಚರಣೆ, ಯಕ್ಷಗಾನದಂತಹ ಕಾರ್ಯಕ್ರಮವನ್ನು ಆಸ್ವಾಧಿಸುವುದರ ಜತೆಗೆ ಕಲೆಗಳ ಪ್ರೋತ್ಸಾಹಕ್ಕೆ ಮುಂದಾಗಬೇಕಾಗಿದೆ ಎಂದರು.

ಗಣ್ಯರಾದ ನರಸಿಂಹ ಕಾರಂತ, ರಾಮ ನವಮಿ ಸಮಿತಿಯ ಎಂ. ವಿಷ್ಣುಮೂರ್ತಿ, ನಿವೃತ್ತ ಬ್ಯಾಂಕ್‌ ಅಧಿಕಾರಿ ಸುಂದರ ಭಟ್‌ ಮತ್ತಿತರರು ಉಪಸ್ಥಿತರಿದ್ದರು. ಯೋಗೀಶ್‌ ಕಾಂಚನ್‌ ನಿರೂಪಿಸಿದರು.

ಉಜಿರೆ ಅಶೋಕ್‌ ಭಟ್‌ ಇವರಿಂದ ಸರಣಿ ಪ್ರವಚನ ಪ್ರತಿ ದಿನ ಸಂಜೆ 5ರಿಂದ ನಿತ್ಯ ದಾಸೋಹಂ ಕೌಸಲೇಂದ್ರಸ್ಯ, ಸರಣಿ ಯಕ್ಷಗಾನ ಬಯಲಾಟ ಸಂಜೆ 6.45ರಿಂದ ಎಲ್ಲೂರು ರಾಮಚಂದ್ರ ಭಟ್‌ ಸಾರಥ್ಯದಲ್ಲಿ ಯಕ್ಷ ಕೂಟ ಕದ್ರಿ ಕಲಾವಿದರಿಂದ ನಿತ್ಯ ಪ್ರಮೀಳಾರ್ಜುನ ಘೋರ ಭೀಷಣ ಕಾಳಗ, ನರಕಾಸುರ ಗರುಡ ಗರ್ವ ಭಂಗ, ಇಂದ್ರಜೀತು ಕಾಳಗ, ಕರಂಡಕಾಸುರ ಗದಾಯುದ್ಧ ಯಕ್ಷಗಾನ ಜರಗಲಿದೆ.

LEAVE A REPLY

Please enter your comment!
Please enter your name here