ಸುಳ್ಯ : ಆಲೆಟ್ಟಿ ಗ್ರಾಮದ ಕಲ್ಲೆಂಬಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವವು ಬ್ರಹ್ಮಶ್ರೀ ಕುಂಟಾರು ರವೀಶ ತಂತಿ ಮತ್ತು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಅವರ ಮಾರ್ಗದರ್ಶನದಲ್ಲಿ ಕುತ್ತಿಕೋಲು ತಂಬುರಾಟ್ಟಿà ಶ್ರೀ ಭಗವತೀ ಕ್ಷೇತ್ರದ ಸ್ಥಾನಿಕರ ನೇತೃತ್ವದಲ್ಲಿ ನಡೆಯಿತು.
ಉಗ್ರಾಣ ತುಂಬುವುದರೊಂದಿಗೆ ಪ್ರಾರಂಭಗೊಂಡು ರಾತ್ರಿ ವಾಸ್ತುಶಿಲ್ಪಿ ಟಿ.ವಿ. ಶಶಿಧರನ್ ಚಾಲಿಂಗಾಲ್ ಅವರ ನೇತೃತ್ವದಲ್ಲಿ ಕುತ್ತಿ ಪೂಜೆ ನಡೆಯಿತು. ಮರುದಿನ ಬೆಳಗ್ಗೆ ಗಣಪತಿ ಹವನ, ಬೆಳಗ್ಗೆ ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ವಯನಾಟ್ ಕುಲವನ್ ದೈವದ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಅಡ್ಪಂಗಾಯ ಭಾಸ್ಕರನ್ ಮತ್ತು ಅಡ³ಂಗಾಯ ಆನಂದನ್ ಅವರ ನೇತೃತ್ವದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಪುದಿಯೋಡ್ಕಲ್ (ಮರೋಟ್) ಕಾರ್ಯಕ್ರಮವು ನಡೆಯಿತು.