Home ಧಾರ್ಮಿಕ ಸುದ್ದಿ ಧರ್ಮ ಕಾರ್ಯಗಳಿಂದ ಸುಸ್ಥಿರ ಸಮಾಜ: ಬಾಳೆಕೋಡಿ ಶ್ರೀ

ಧರ್ಮ ಕಾರ್ಯಗಳಿಂದ ಸುಸ್ಥಿರ ಸಮಾಜ: ಬಾಳೆಕೋಡಿ ಶ್ರೀ

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಕುಂಭ ಮಹೋತ್ಸವ

819
0
SHARE

ಮಂಗಳೂರು : ಧರ್ಮ ಕಾರ್ಯಗಳಲ್ಲಿ ಎಲ್ಲರೂ ತೊಡಗಿಸಿ ಕೊಂಡರೆ ಸುಸ್ಥಿರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಕನ್ಯಾನ ಬಾಳೆಕೋಡಿಯ ಡಾ| ಶಶಿಕಾಂತಮಣಿ ಸ್ವಾಮೀಜಿ ಹೇಳಿದರು.

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಜಾತ್ರೆಯ ಕುಂಭ ಮಹೋತ್ಸವದ ಹಿನ್ನೆಲೆಯಲ್ಲಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಭಗವಂತನ ಸೇವೆಯಿಂದ ಆತನ ಕೃಪೆಗೆ ಪಾತ್ರವಾಗಲು ಸಾಧ್ಯ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಮಹಾ ಸನ್ನಿಧಿಯಾಗಿರುವ ಕುಲಶೇಖರ ಶ್ರೀ ವೀರನಾರಾಯಣ ದೇಗುಲದ ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲ ಭಕ್ತರೂ ಕೈಜೋಡಿಸಬೇಕು ಎಂದರು.

ಕದ್ರಿ ಹಿಲ್ಸ್‌ ಐಟಿಐ ಪ್ರಾಚಾರ್ಯ ಗಿರಿಧರ ಸಾಲಿಯಾನ್‌ ಬಿ. ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ| ವೈ. ಭರತ್‌ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.
ಗಿರಿಧರ ಸಾಲಿಯಾನ್‌, ಡಾ| ಅಣ್ಣಯ್ಯ ಕುಲಾಲ್‌, ಪ್ರವೀಣ್‌ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಮನಪಾ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಮನಪಾ ಸದಸ್ಯ ಕಿಶೋರ್‌ ಕೊಟ್ಟಾರಿ, ವಿಕಾಸ್‌ ಕಾಲೇಜಿನ ಡೀನ್‌ ಡಾ| ಮಂಜುಳಾ ಅನಿಲ್‌ ರಾವ್‌, ವೇಣೂರು ಕುಂಭಶ್ರೀ ಶಿಕ್ಷಣ ಸಂಸ್ಥೆಯ ಸಂಚಾಲಕ ಗಿರೀಶ್‌ ಕೆ.ಎಚ್‌., ನಿವೃತ್ತ ಕಂದಾಯ ನಿರೀಕ್ಷಕ ಎಚ್‌. ಪದ್ಮಕುಮಾರ್‌, ನ್ಯಾಯವಾದಿಗಳಾದ ಅರುಣ್‌ ಬಂಗೇರ ಬೆಳುವಾಯಿ, ವಿಜಯ್‌ ಗೌಡ ಶಿಬ್ರಿಕೆರೆ ಎಡಪದವು ಮುಖ್ಯ ಅತಿಥಿಗಳಾಗಿದ್ದರು. ಕೃಷ್ಣ ಅತ್ತಾವರ, ದಾಮೋದರ ಅಶೋಕ ನಗರ, ಪ್ರೇಮಾನಂದ ಕುಲಾಲ್‌ ಕೋಡಿಕಲ್‌, ಗೀತಾ ಮನೋಜ್‌ ಉಪಸ್ಥಿತರಿದ್ದರು. ರವೀಂದ್ರ ಮುನ್ನಿಪ್ಪಾಡಿ ಸ್ವಾಗತಿಸಿ, ಪುರುಷೋತ್ತಮ ಕುಲಾಲ್‌ ವಂದಿಸಿದರು. ಸುಂದರ ಕುಲಾಲ್‌ ಶಕ್ತಿನಗರ, ಶರತ್‌, ಧನ್ಯಾ ನಿರ್ವಹಿಸಿದರು

LEAVE A REPLY

Please enter your comment!
Please enter your name here