ಕುಳಾಯಿ : ಚಿತ್ರಾಪುರ ಮಠ, ಶ್ರೀ ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಗುರುವಾರ ಚಪ್ಪರ ಮುಹೂರ್ತವನ್ನು ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥರು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಉತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ನಡೆಸಿದ್ದೇವೆ. ಸನ್ನಿಧಾನದಲ್ಲಿ ಲಕ್ಷ್ಮೀ ನಾರಾಯಣ ಮೂರ್ತಿ ಯನ್ನು ಪೂಜಿಸುತ್ತಿದ್ದೇವೆ. ಲಕ್ಷ್ಮೀ ನಾರಾಯಣ ಪೂಜೆಯು ಉತ್ಸವದ ಪೂರ್ವ ಭಾವಿಯಾಗಿ ನಡೆಯುತ್ತಿದೆ. ದೇವರ ಅನುಗ್ರಹದ ಮೂಲಕ ದೇವರ ಕಾರ್ಯ ಸುಸೂತ್ರವಾಗಿ ನೆರವೇರಲಿ ಎಂದರು. ಊರಿನ ಜನತೆ, ಸಂಘ – ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.
ಕಗ್ಗಿ ಗೋಪಾಲಕೃಷ್ಣ ಆಚಾರ್ಯ, ಕೌಶಿಕ್ ಭಟ್, ಉಮೇಶ್ ಬಸವರಾಜ್, ಜಗದೀಶ್, ಹರಿಶ್ಚಂದ್ರ ಕರ್ಕೇರ, ಬೈಕಂಪಾಡಿ ಮೊಗವೀರ ಮಹಾಸಭಾ ಉಪಾಧ್ಯಕ್ಷ ಆರ್.ಕೆ. ಪುರುಷೋತ್ತಮ, ಗಿರೀಶ್ ಕರ್ಕೇರ, ಮನಪಾ ಸದಸ್ಯೆ ಸುಮಿತ್ರಾ ಕರಿಯಾ, ವೇದಾವತಿ, ಸುನೀತ್ ಚಿತ್ರಾಪುರ, ಹರೀಶ್ ಚಿತ್ರಾಪುರ, ತಿಲಕ್ ಚಿತ್ರಾಪುರ, ಬಿಲ್ಲವ ಸಮಿತಿ ಮುಖಂಡ ಲೋಕೇಶ್ ಸುವರ್ಣ, ರಮೇಶ್ ಅಂಚನ್, ಹರೀಶ್ ದೇವಾಡಿಗ, ಬಲರಾಮ ದೇವಾಡಿಗ ಮತ್ತಿತ್ತರು ಉಪಸ್ಥಿತರಿದ್ದರು. ದೇವಸ್ಥಾನದ ಮುಖ್ಯ ಅರ್ಚಕ ಕಾರ್ತಿಕ್ ಭಟ್ ವಂದಿಸಿದರು.