Home ಧಾರ್ಮಿಕ ಸುದ್ದಿ ಕುಕ್ಕಂಗೋಡ್ಲು ಕ್ಷೇತ್ರ: ದಾರಂದ ಮುಹೂರ್ತ

ಕುಕ್ಕಂಗೋಡ್ಲು ಕ್ಷೇತ್ರ: ದಾರಂದ ಮುಹೂರ್ತ

1596
0
SHARE

ನೀರ್ಚಾಲು: ಕುಕ್ಕಂಗೋಡ್ಲು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ದಾರಂದ ಮುಹೂರ್ತವು ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳವರ ನಿರ್ದೇಶನದಂತೆ ಪುರೋಹಿತರಾದ ರಾಮಕೃಷ್ಣ ಮಯ್ಯ ಅವರ ನೇತೃತ್ವದಲ್ಲಿ ನಡೆಯಿತು. ಕಾಷ್ಠಶಿಲ್ಪಿ ನಾರಾಯಣ ಆಚಾರ್ಯ ಕಾರಡ್ಕ, ಶಿಲೆಯ ಶಿಲ್ಪಿ ಅಣ್ಣಪ್ಪ ಮುರುಡೇಶ್ವರ, ನಿರ್ಮಾಣ ಮೇಸ್ತ್ರಿ ಮನೋಜ್‌ ಸಹಕರಿಸಿದರು.

ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಗೂ ಆಡಳಿತ ಮೊಕ್ತೇಸರ ನ್ಯಾಯವಾದಿ ಗೌರಿಶಂಕರ ರೈ ಕೋಡಿಂಗಾರುಗುತ್ತು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೂಬಾಣಕುಯಿ ಭಗವತಿ ದೇವಸ್ಥಾನದ ಆಡಳಿತ ಮೊಕ್ತೇಸರ ಕುಂಞಿರಾಮನ್‌ ತ್ರಚ್ಚಂಗಾಡ್‌ ಮಾತನಾಡುತ್ತಾ ಅತಿ
ಶೀಘ್ರದಲ್ಲಿ ಶ್ರೀದೇವರ ಬ್ರಹ್ಮಕಲಶ ಮಹೋತ್ಸವವನ್ನು ಕಣ್ತುಂಬಿಕೊಳ್ಳುವ ಭಾಗ್ಯ ನಮ್ಮದಾಗಲಿ, ಭಗವದ್ಭಕ್ತರ ಸಹಕಾರದಿಂದ ಮಾತ್ರ ಇದು ಸಾಧ್ಯ ಎಂದು ಹೇಳಿದರು.

ಹಿರಿಯರಾದ ನಿವೃತ್ತ ಮುಖ್ಯೋಪಾಧ್ಯಾಯ ಶಂಕರ ಭಟ್‌ ಪಡಿಯಡ್ಪು ಮಾತನಾಡಿದರು. ಕಾರ್ಯಾಧ್ಯಕ್ಷ ಏವುಂಜೆ ಶ್ಯಾಮಭಟ್‌ ಮುಂದಿನ ಕೆಲಸ ಕಾರ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಮಹೇಶ ಪಡಿಯಡ್ಪು ಇದುವರೆಗೆ ನಡೆದ ಕಾಮಗಾರಿಯ ವರದಿ ನೀಡಿದರು. ಮಹಿಳಾ ಘಟಕದ ಗೌರವಾಧ್ಯಕ್ಷೆ ಮೈನಾ ಜಿ. ರೈ, ರಾಜೇಶ್ವರಿ ಕೋಡಿಂಗಾರು, ಡಾ| ನರೇಶ್‌ ರೈ, ಸತೀಶ್ಚಂದ್ರ ಭಂಡಾರಿ ಕೋಳಾರು, ಗೋಪಾಲಕೃಷ್ಣ ಭಟ್‌ ಪಡಿಯಡ್ಪು, ಸುಬ್ರಹ್ಮಣ್ಯ ಮಯ್ಯ ಕುಕ್ಕಂಗೋಡ್ಲು, ಶಿವರಾಮ ಭಟ್‌ ಭರಣ್ಯ, ಪ್ರಭಾಕರ ಕೋಳಿಯಡ್ಕ, ಶಿವರಾಮ ಭಟ್‌ ಕಜಳ, ಪೆರ್ವ ಹರಿಪ್ರಸಾದ್‌, ಉದಯಶಂಕರ ಭಟ್‌ ಕಜಳ, ಗಣರಾಜ ಕೋಡಾ¾ಡು, ಗಣರಾಜ ನಿಡುಗಳ, ನಾರಾಯಣ ಮೇಸ್ತ್ರಿ, ಮಹಾಲಿಂಗ ನಾಯ್ಕ ಪಡಿಯಡ್ಪು, ಆನಂದಪಡಿಯಡ್ಪು ಮೊದಲಾದವರು ಉಪಸ್ಥಿತರಿದ್ದರು. ಅರ್ಚಕ ನಾರಾಯಣ ಮಯ್ಯ ಸ್ವಾಗತಿಸಿ, ಚಂದ್ರಹಾಸ ರೈ ವಂದಿಸಿದರು.

LEAVE A REPLY

Please enter your comment!
Please enter your name here