ಬಡಗನ್ನೂರು: ಒಳಮೊಗ್ರು ಗ್ರಾಮದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಕುಕ್ಕುಮುಗೇರು ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮದ ಪ್ರಯುಕ್ತ ಜ. 29ರಂದು ಹಸುರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಮೆರವಣಿಗೆಯನ್ನು ದರ್ಬೆತ್ತಡ್ಕ ಶಾಲಾ ಬಳಿ ವಿದ್ಯಾರ್ಥಿನಿಯರು ದೀಪಾರಾಧನೆ ಮಾಡುವ ಮೂಲಕ ಚಾಲನೆ ನೀಡಿದರು. ದೈವಸ್ಥಾನದ ಮೊಕ್ತೇಸರರಾದ ಚಿಕ್ಕಪ್ಪ ನಾೖಕ್, ವಿಜಯ ಕುಮಾರ್ ರೈ ಮುಗೇರು ಮತ್ತು ಒಳಮೊಗ್ರು ಗ್ರಾ.ಪಂ. ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಉತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ರೈ ಚೆಲ್ಯಡ್ಕ, ಕುಂಬ್ರ ಸಿ.ಎ. ಬ್ಯಾಂಕ್ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಗ್ರಾ.ಪಂ. ಸದಸ್ಯರಾದ ತ್ರಿವೇಣಿ ಪಲ್ಲತ್ತಾರು, ಮಹೇಶ್ ಕೇರಿ, ರಾಮಕೃಷ್ಣ ಮುಡಾಲ, ರಾಜೇಶ್ ರೈ ಪರ್ಪುಂಜ, ಮಾಧವ ರೈ ಕುಂಬ್ರ, ಶಿಕ್ಷಕಿ ಶೋಭಾ, ಬಾಬು ಪ್ರಸಾದ್, ಬಾಬು ದರ್ಬೆತ್ತಡ್ಕ, ಪುಷ್ಪರಾಜ್ ಕುಡ್ಚಿಲ, ವೆಂಕಪ್ಪ ದರ್ಬೆತ್ತಡ್ಕ, ಪ್ರೇಮ್ರಾಜ್ ರೈ, ಶಿವರಾಮ ಗೌಡ ಬೊಳ್ಳಾಡಿ, ರಕ್ಷಿತ್ ರೈ ಮುಗೇರು, ಅರುಣ್ ರೈ ಬಿಜಳ, ಹರಿಪ್ರಸಾದ್ ಶೆಟ್ಟಿ ನೀರ್ಪಾಡಿ ಉಪಸ್ಥಿತರಿದ್ದರು.
ಹಸುರು ಹೊರೆ ಕಾಣಿಕೆ ಮೆರವಣಿಗೆ ದರ್ಬೆತ್ತಡ್ಕ ಶಾಲೆ, ನೀರ್ಪಾಡಿ, ಉಪ್ಪಳಿಗೆ, ಗುಮ್ಮಟೆಗದ್ದೆ, ಮುಂಡೋವುಮೂಲೆ, ಅಜ್ಜಿಕಲ್ಲು, ಬೈರೋಡಿ, ಕಾಪಿಕಾಡು, ತೊಟ್ಲ, ಕೈಕಾರ, ಪರ್ಪುಂಜ, ಕೊೖಲತ್ತಡ್ಕ, ಕುಂಬ್ರ, ಶೇಖಮಲೆ, ಮುಡಾಲ ಇತ್ಯಾದಿ ಕಡೆಗಳಲ್ಲಿ ಸಾಗಿ ರಾಜಮಾಡಕ್ಕೆ ಬಂದಿತು.
ಜ. 29ರಂದು ಬೆಳಗ್ಗೆ ಮುಗೇರು ಕದಿಕೆ ಚಾವಡಿಯಲ್ಲಿ ಗಣಪತಿ ಹೋಮ, ತಂಬಿಲ ಸೇವೆ, ಮುಗೇರು ಕದಿಕೆ ಚಾವಡಿಯಲ್ಲಿ ಕದಿಕೆ ತುಂಬಿಸುವ ಕಾರ್ಯಕ್ರಮ ನಡೆಯಿತು. ಸಂಜೆ ಕೈಕಾರ ಕಿನ್ನಿಮಾಣಿ ದೈವಸ್ಥಾನದಿಂದ ಕಿನ್ನಿಮಾಣಿ ಹಾಗೂ ಪರಿವಾರ ದೈವಗಳ ಕೀರ್ವಾಳು ಭಂಡಾರ ಇಳಿಸಿ ಹೊಸಮಾರು ಕಟ್ಟೆಗೆ ಬಂದು, ರಾತ್ರಿ ಮುಗೇರು ಕದಿಕೆ ಚಾವಡಿಯಿಂದ ಶ್ರೀ ಪೂಮಾಣಿ ದೈವ ಹಾಗೂ ಪಿಲಿಭೂತ ಮಲರಾಯ ದೈವಗಳ ಕೀರ್ವಾಳು ಹಾಗೂ ಪರಿವಾರ ದೈವಗಳ ಕೀರ್ವಾಳು ಭಂಡಾರದೊಂದಿಗೆ ಸೇರಿ ಬೊಳ್ಳಾಡಿ ರಾಜಮಾಡದಲ್ಲಿ ಏರಿಸುವ ಕಾರ್ಯಕ್ರಮ ನಡೆಯಿತು.