Home ಧಾರ್ಮಿಕ ಸುದ್ದಿ ಕುಕ್ಕಿನಡ್ಕ ದೇಗುಲ: ಪ್ರತಿಷ್ಠಾ ವರ್ಧಂತಿ

ಕುಕ್ಕಿನಡ್ಕ ದೇಗುಲ: ಪ್ರತಿಷ್ಠಾ ವರ್ಧಂತಿ

691
0
SHARE

ನರಿಮೊಗರು : ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾ ವರ್ಧಂತಿ ಉತ್ಸವವು ಮಾ. 8ರಂದು ಬ್ರಹ್ಮಶ್ರೀ ವೇ|ಮೂ|ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಅವರ ನೇತೃತ್ವದಲ್ಲಿ ಜರಗಿತು.

ಜಾತ್ರೆ ಮತ್ತು ನೇಮದ ಪ್ರಯುಕ್ತ ಮಾ. 7ರಂದು ಸಂಜೆ ಹಸುರು ಹೊರೆ ಕಾಣಿಕೆ ಸಮರ್ಪಣೆ, ಉಗ್ರಾಣ ಪೂಜೆ ನಡೆಯಿತು. ಮಾ. 8ರ ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ, ನಾಗ ಸನ್ನಿ ಯಲ್ಲಿ ಆಶ್ಲೇಷಾ ಬಲಿ, ನಾಗ ತಂಬಿಲ, ದೈವಗಳಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಸಿಡಿಮದ್ದು ಪ್ರದರ್ಶನ ಸಂಜೆ ದೈವಗಳ ಭಂಡಾರ ತೆಗೆದ ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ, ದರ್ಶನ ಬಲಿ, ಬಟ್ಟಲು ಕಾಣಿಕೆಯ ಅನಂತರ ಉಳ್ಳಾಕುಲು, ರಕ್ತೇಶ್ವರಿ, ವ್ಯಾಘ್ರ ಚಾಮುಂಡಿ, ವರ್ಣಾರ ಪಂಜುರ್ಲಿ, ಬೊಟ್ಟಿ ಭೂತ ಹಾಗೂ ಗುಳಿಗನ ನೇಮ ನಡೆಯಿತು.

ಮಾ. 9ರ ಬೆಳಗ್ಗೆ ಕಲಶ ಆರಾಧನೆ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರಗಲಿದೆ.

LEAVE A REPLY

Please enter your comment!
Please enter your name here