Home ಧಾರ್ಮಿಕ ಸುದ್ದಿ ಕುಕ್ಕೆ: ಯುಗಾದಿ ರಥೋತ್ಸವ

ಕುಕ್ಕೆ: ಯುಗಾದಿ ರಥೋತ್ಸವ

750
0
SHARE

ಸುಬ್ರಹ್ಮಣ್ಯ : ಸೌರಮಾನ ಯುಗಾದಿ ದಿನವಾದ ಸೋಮವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ರಥೋತ್ಸವವವು ಸಡಗರ ಸಂಭ್ರಮದಿಂದ ನಡೆಯಿತು. ಸಹಸ್ರಾರು ಮಂದಿ ರಥೋತ್ಸವ ವೀಕ್ಷಿಸಿದರು. ಹೊರಾಂಗಣದಲ್ಲಿ ಉತ್ಸವಗಳು ನೆರವೇರಿದ ಬಳಿ ರಥಬೀದಿಯಲ್ಲಿ ರಥೋತ್ಸವ ನಡೆಯಿತು.

ರಥೋತ್ಸವ ನಡೆದ ಸಲುವಾಗಿ ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ದೇವರ ದರ್ಶನ ಹಾಗೂ ಆಶ್ಲೇಷ ಬಲಿ ಮೊದಲಾದ ಸೇವೆಗಳು ಬೆಳಗ್ಗೆ 8.30ರ ಬಳಿಕ ನರವೇರಿದವು. ಯುಗಾದಿ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ವಿವಿಧ ಸೇವೆಗಳನ್ನು ಪೂರೈಸಿದರು. ಕುಮಾರಧಾರಾ ಹಾಗೂ ದರ್ಪಣ ತೀರ್ಥ ನದಿಯಲ್ಲಿ ಭಕ್ತರು ಪುಣ್ಯ ಸ್ನಾನ ನೆರವೇರಿಸಿಕೊಂಡರು.

LEAVE A REPLY

Please enter your comment!
Please enter your name here