ಸುಬ್ರಹ್ಮಣ್ಯಡಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೆಯ ಪ್ರಯುಕ್ತ ಸೋಮವಾರ ರಾತ್ರಿ ಶ್ರೀದೇವರ ಉತ್ಸವಾದಿಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು. ಮಹಾಪೂಜೆಯ ನಂತರ ದೇವರ ಹೊರಾಂಗಣ ಉತ್ಸವಗಳು ಆರಂಭವಾಯಿತು. ಆರಂಭದಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ನೆರವೇರಿತು. ಬಳಿಕ ವಿವಿಧ ಪುಷ್ಪಗಳಿಂದ ತುಂಬಿದ್ದ ಸಾಲಾಂಕೃತ ಪಾಲಕಿಯಲ್ಲಿ ಶ್ರೀದೇವರ ಪಾಲಕಿ ಉತ್ಸವ ನೆರವೇರಿತು. ಬಳಿಕ ಚಂದ್ರ ಮಂಡಲ ರಥದಲ್ಲಿ ದೇವರ ಮಯೂರ ವಾಹನೋತ್ಸವ ನೆರವೇರಿತು. ಸವಾರಿ ಮಂಟಪದಲ್ಲಿರುವ ಸವಾರಿ ಕಟ್ಟೆಯಲ್ಲಿ ಶ್ರೀದೇವರ ಕಟ್ಟೆಪೂಜೆ ನೆರವೇರಿತು.