Home ಧಾರ್ಮಿಕ ಸುದ್ದಿ ಅಧಿಕ ಆದಾಯದ ದೇಗುಲ: ಕುಕ್ಕೆಗೆ ಅಗ್ರಸ್ಥಾನ, ಕೊಲ್ಲೂರು ದ್ವಿತೀಯ

ಅಧಿಕ ಆದಾಯದ ದೇಗುಲ: ಕುಕ್ಕೆಗೆ ಅಗ್ರಸ್ಥಾನ, ಕೊಲ್ಲೂರು ದ್ವಿತೀಯ

812
0
SHARE

ಉಡುಪಿ: ನಾಗಾರಾಧನೆಗೆ ಪ್ರಸಿದ್ಧಿ ಪಡೆದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯ 100 ಕೋ.ರೂ. ಎಂದು ಸರಕಾರ ಘೋಷಿಸಿದೆ. ರಾಜ್ಯದಲ್ಲಿ ಶ್ರೀಮಂತ ದೇವಸ್ಥಾನ ಎಂಬ ಅದರ ಪಟ್ಟ ಭದ್ರವಾಗಿದೆ. ಕಳೆದ 9 ತಿಂಗಳ ಸೇವೆಗಳ ಲೆಕ್ಕಾಚಾರ ನಡೆಸದೆ ಸರಕಾರ ಈ ಘೋಷಣೆ ಮಾಡಿರುವುದು ಅಚ್ಚರಿ ಮೂಡಿಸಿದೆ.

ರಾಜ್ಯ ಸರಕಾರಕ್ಕೆ ಅತೀ ಹೆಚ್ಚು ಆದಾಯ ತರುವ ಮೊದಲ 10 ದೇವಸ್ಥಾನಗಳ ಪಟ್ಟಿಯನ್ನು ಸರಕಾರ ಬಿಡುಗಡೆ ಮಾಡಿದೆ. ಒಂದು ವರ್ಷ ಅವಧಿಯಲ್ಲಿ ದೇವಸ್ಥಾನಗಳು ವಿವಿಧ ಮೂಲಗಳಿಂದ ಗಳಿಸಿರುವ ಒಟ್ಟು ಆದಾಯದ ಆಧಾರದಲ್ಲಿ ಸ್ಥಾನಗಳನ್ನು ನೀಡಲಾಗಿದೆ.

ಅಚ್ಚರಿ ಮೂಡಿಸಿದ ಘೋಷಣೆ
2018-19ನೇ ಸಾಲಿನಲ್ಲಿ ಎಪ್ರಿಲ್‌ನಿಂದ 2019ರ ಮಾರ್ಚ್‌ ತನಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ 92,09,13,824 ರೂ. ಆಗಿತ್ತು. ಹಿಂದಿನ ವರ್ಷಗಳಲ್ಲಿ ವಾರ್ಷಿಕ ಲೆಕ್ಕವನ್ನು ಈ ನಡುವಿನ ಅವಧಿಯನ್ನು ಪರಿಗಣಿಸಿ ನಡೆಸಲಾಗುತಿತ್ತು. ಆದರೆ 2019ರ ಮಾರ್ಚ್‌ನಿಂದ 2020ರ ಜನವರಿ ತನಕದ ಲೆಕ್ಕಾಚಾರ ಇನ್ನೂ ಆಗಿಲ್ಲ. ಇದರ ನಡುವೆ ಸರಕಾರ ದೇಗುಲದ ಆದಾಯ 100 ಕೋ.ರೂ. ಎಂದು ಘೋಷಿಸಿರುವುದು ಅಚ್ಚರಿ ಮೂಡಿಸಿದೆ. ಕಳೆದ 9 ತಿಂಗಳ ಅಂದಾಜು ಸೇವೆಗಳ ಪರಿಗಣಿಸಿ ಆದಾಯ 100 ಕೋ.ರೂ. ಎಂದು ಘೋಷಿಸಿರುವ ಸಾಧ್ಯತೆಯಿದೆ.

ದೇವಸ್ಥಾನದ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ, ಕೃಷಿಯಿಂದ 92.09 ಕೋ.ರೂ. ಆದಾಯ ಹಿಂದಿನ ಸಾಲಿನಲ್ಲಿ ಬಂದಿದೆ. 2017-18ರ ಸಾಲಿನಲ್ಲಿ 95,92,54,363 ಕೋ.ರೂ. ಆದಾಯವಿತ್ತು. 2018ರಲ್ಲಿ ಸುರಿದ ಭಾರೀ ಮಳೆಯಿಂದ ಪ್ರಾಕೃತಿಕ ವಿಕೋಪಗಳು ಸಂಭ ವಿಸಿದ್ದರಿಂದ ಪ್ರವಾಸಿಗರ ಕೊರತೆ ಕಂಡುಬಂದಿತ್ತು. ಆಗ ಕುಕ್ಕೆ ಆದಾಯ

3.83 ಕೋ.ರೂ.ಗೆ ಇಳಿದಿದ್ದರೆ ದೊಡ್ಡ
ಬಳ್ಳಾಪುರ ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುವ ಭಕ್ತರು ಹೆಚ್ಚಿ ಅಲ್ಲಿನ ದೇವಸ್ಥಾನದ ಆದಾಯ 65 ಲಕ್ಷ ರೂ. ಹೆಚ್ಚಳಗೊಂಡಿತ್ತು.

ಕೊಲ್ಲೂರು ದ್ವಿತೀಯ
ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಎರಡನೇ ಸ್ಥಾನದಲ್ಲಿದೆ. 40ರಿಂದ 42 ಕೋ.ರೂ. ಆದಾಯದ ಕಟೀಲು ದುರ್ಗಾಪರಮೇಶ್ವರಿ ದೇಗುಲ 3ನೇ ಸ್ಥಾನ ಪಡೆದಿದೆ.

ಹಿಂದಿನ ಸಾಲಿನ ವಾರ್ಷಿಕ ಲೆಕ್ಕಚಾರ ಕಳೆದ ಮಾರ್ಚ್‌ಗೆ ಅಂತಿಮ ಗೊಳಿಸಲಾಗಿತ್ತು. ಬಳಿಕ ಲೆಕ್ಕಪತ್ರ ಸಿದ್ಧಪಡಿಸಿಲ್ಲ. ಸೇವೆ ಮತ್ತು ಇತರ ವಿವರಗಳ ಲೆಕ್ಕಾಚಾರ ನಡೆದ ಬಳಿಕ ಮಾಹಿತಿ ನೀಡುವೆ.
– ರವೀಂದ್ರ ಎಂ.ಎಚ್‌., ಕಾರ್ಯನಿರ್ವಹಣಾಧಿಕಾರಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

– ಬಾಲಕೃಷ್ಣ ಭೀಮಗುಳಿ

LEAVE A REPLY

Please enter your comment!
Please enter your name here