Home ಧಾರ್ಮಿಕ ಸುದ್ದಿ ಕುಕ್ಕೆ ಸುಬ್ರಹ್ಮಣ್ಯ: ಭಾರೀ ಜನಸ್ತೋಮ

ಕುಕ್ಕೆ ಸುಬ್ರಹ್ಮಣ್ಯ: ಭಾರೀ ಜನಸ್ತೋಮ

834
0
SHARE

ಸುಬ್ರಹ್ಮಣ್ಯ: ಆಶ್ಲೇಷಾ ನಕ್ಷತ್ರ ದಿನವಾದ ರವಿವಾರ ನಾಗರಾಧನೆಯ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾರಿ ಪ್ರಮಾಣದ ಭಕ್ತರು ಕಂಡುಬಂದರು. ಸರಕಾರಿ ರಜೆ ಹಾಗೂ ಶಾಲೆಗಳಿಗೆ ವಾರ್ಷಿಕ ರಜೆ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು.

ಶನಿವಾರ ಸಂಜೆಯಿಂದಲೇ ನಾಡಿನ ವಿವಿಧೆಡೆಯಿಂದ ಭಕ್ತರು ಕ್ಷೇತ್ರದ ಕಡೆಗೆ ಆಗಮಿಸಿದ್ದರು. ದೇವಸ್ಥಾನದ ವಸತಿಗ್ರಹ, ಛತ್ರ ಹಾಗೂ ವಸತಿಗೃಹಗಳಲ್ಲಿ ರಾತ್ರಿ ತಂಗಿದರು. ಉಳಿದುಕೊಳ್ಳಲು ವಸತಿ ಸಿಗದೆ ಹಲವರು ತೊಂದರೆ ಅನುಭವಿಸಿದರು. ರವಿವಾರ ಬೆಳಗ್ಗೆ ಅಧಿಕ ಮಂದಿ ಭಕ್ತರು ದೇವರ ದರ್ಶನ ಹಾಗೂ ಸೇವೆಗಳಲ್ಲಿ ತೊಡಗಿಸಿಕೊಂಡರು.

ರವಿವಾರ ಕುಕ್ಕೆನಾಥನ ದರ್ಶನಕ್ಕಾಗಿ ಭಕ್ತ ಸಾಗರವೇ ಕ್ಷೇತ್ರದಲ್ಲಿತ್ತು. ಪ್ರಮುಖ ಸೇವಗಳಾದ ತುಲಾಭಾರ, ಆಶ್ಲೇಷಾ ಬಲಿ, ನಾಗಪ್ರತಿಷ್ಠೆ, ಶೇಷ ಸೇವೆ ಇತ್ಯಾದಿಗಳನ್ನು ಪೂರೈಸಿಕೊಂಡರು. ಮಹಾಪೂಜೆ, ಕಾರ್ತಿಕ ಪೂಜೆ, ಮಹಾಭಿಷೇಕಗಳೂ ಅಧಿಕ ಸಂಖ್ಯೆಯಲ್ಲಿ ನೆರವೇರಿವೆ.

ಭಕ್ತರು ಸರತಿ ಸಾಲಿನಲ್ಲಿ ನಿಂತು ಸೇವಾ ರಶೀದಿ ಇತ್ಯಾದಿಗಳನ್ನು ನೆರವೇರಿಸಿಕೊಂಡರು. ಯಾತ್ರಿಗಳನ್ನು ನಿಯಂತ್ರಿಸಲು ಪೊಲೀಸರು, ಗೃಹರಕ್ಷಕ ಸಿಬಂದಿ, ದೇಗುಲದ ಸಿಬಂದಿ ಬಹಳ ಕಷ್ಟಪಟ್ಟರು. ಸ್ಥಳೀಯರು ಸ್ವಯಂಸೇವಕರಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here