Home ಧಾರ್ಮಿಕ ಸುದ್ದಿ ಕುಕ್ಕೆ: ಎ. 27ರಿಂದ ಮಠದಲ್ಲಿ ನರಸಿಂಹ ಜಯಂತಿ

ಕುಕ್ಕೆ: ಎ. 27ರಿಂದ ಮಠದಲ್ಲಿ ನರಸಿಂಹ ಜಯಂತಿ

1635
0
SHARE

ಸುಬ್ರಹ್ಮಣ್ಯ: ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ನರಸಿಂಹ ಜಯಂತಿ ಮಹೋತ್ಸವದ ಅಂಗವಾಗಿ ಶ್ರೀಮದಾನಂದ ತೀರ್ಥ ತತ್ವದರ್ಶಿನಿ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಎ. 27ರಿಂದ ಮೇ 1ರ ತನಕ ನಡೆಯಲಿದೆ.

ನಿತ್ಯವೂ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಎ. 27ರಂದು ‘ಮಹಾಭಾರತದಲ್ಲಿ ಸಾಮಾಜಿಕ ಮೌಲ್ಯಗಳು’ ವಿಚಾರ ಸಂಕಿರಣ ಮತ್ತು ಸಮ್ಮಾನ ನಡೆಯಲಿದೆ. ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಶ್ರೀ ಸಂಪುಟ ನರಸಿಂಹ ಮಠದ ಯತಿಗಳು ಉಪಸ್ಥಿತರಿರುವರು. ಬಳಿಕ ಮಹಾಭಾರತದಲ್ಲಿ ಸ್ತ್ರೀಯರು, ಮಹಾಭಾರತದ ರಾಜಕಾರಣ ಪ್ರಬಂಧ ಮಂಡನೆ ನಡೆಯಲಿದೆ. ಶ್ರೀ ನರಸಿಂಹಾನುಗ್ರಹ ಪ್ರಶಸ್ತಿಯನ್ನು ಡಾ| ಬನ್ನಂಜೆ ಗೋವಿಂದಾಚಾರ್ಯ ಅವರಿಗೆ ನೀಡಿ, ಗೌರವಿಸಲಾಗುವುದು. ಬಳಿಕ ಕಂಸ ವಿವಾಹ -ಕೃಷ್ಣಾರ್ಜುನ ಯಕ್ಷಗಾನ ನಡೆಯುವುದು.

ಎ. 28ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ, ಎ. 29ರಂದು ಭಕ್ತಿ ಸಂಗೀತ ಕಲಾವಿದ ಯಜ್ನೇಶ್‌ ಆಚಾರ್ಯ ಬಳಗದವರಿಂದ, ಮಧ್ಯಾಹ್ನ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ ಉಡುಪಿ ಮತ್ತು ವೇದವ್ಯಾಸ ಸಂಶೋಧನ ಕೇಂದ್ರ ಸುಬ್ರಹ್ಮಣ್ಯ ಮಠ ಇದರ ಸಹಯೋಗದಲ್ಲಿ ಆಚಾರ್ಯ ಮಧ್ವರು ಅದೃಶ್ಯರಾಗಿ 700ನೆಯ ವರ್ಷದ ಸಂಸ್ಮರಣೆಯಲ್ಲಿ ವಿಶ್ವದಾದ್ಯಂತ ಸಂಚರಿಸುತ್ತಿರುವ ಆನಂದ ತೀರ್ಥ ಜ್ಞಾನಯಾತ್ರೆ ನಡೆಯಲಿದೆ. ಅಪರಾಹ್ನ ಶ್ರೀ ಮಧ್ವಾಚಾರ್ಯ ಪ್ರತಿಮೆ ಮೆರವಣಿಗೆ ನಡೆಯುವುದು. ಸಭಾ ಕಾರ್ಯಕ್ರಮದಲ್ಲಿ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು.ಮುಖ್ಯ ಅತಿಥಿಗಳಾಗಿ ಲಕ್ಷ್ಮೀನಾರಾಯಣ ಆಸ್ರಣ್ಣ ಕಟೀಲು, ಪ್ರದೀಪಕುಮಾರ ಕಲ್ಕೂರ ಮತ್ತಿತರ ಗಣ್ಯರು ಉಪಸ್ಥಿತರಿರುವರು.

ಎ. 29ರಂದು ಸಂಜೆ ಹಿಂದೂಸ್ತಾನಿ ಭಜನೆ, ಎ. 30ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ, ಮೇ 1ರಂದು ‘ಶಾಂಭವಿ ವಿಲಾಸ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ನರಸಿಂಹ ಸ್ವಾಮಿ ಮಠದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here