Home ಧಾರ್ಮಿಕ ಸುದ್ದಿ ಕುಕ್ಕೆ: ಪುಣ್ಯ ಕ್ಷೇತ್ರದಲ್ಲಿ ರವಿವಾರ ಅತ್ಯಧಿಕ ಭಕ್ತಸಂದಣಿ

ಕುಕ್ಕೆ: ಪುಣ್ಯ ಕ್ಷೇತ್ರದಲ್ಲಿ ರವಿವಾರ ಅತ್ಯಧಿಕ ಭಕ್ತಸಂದಣಿ

376
0
SHARE

ಸುಬ್ರಹ್ಮಣ್ಯ : ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರವಿವಾರ ಭಕ್ತ ಸಾಗರವೇ ಹರಿದು ಬಂದಿತ್ತು.

ಷಷ್ಠಿಯ ದಿನವಾದ ರವಿವಾರ ಸಹ ಸ್ರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ, ದೇವರ ದರುಶನ ಮಾಡಿದರು. ಶಾಲೆಗಳಿಗೆ ಬೇಸಗೆ ರಜೆ ಮತ್ತು ಕಚೇರಿಗಳಿಗೆ ವಾರದ ರಜೆ ಇದ್ದುದರಿಂದ ಹಾಗೂ ಷಷ್ಠಿ ತಿಥಿಯೂ ಬಂದುದರಿಂದ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತಸಂದಣೆ ಕಂಡು ಬಂತು. ಜಾತ್ರೆ ಹೊರತುಪಡಿಸಿ ದಾಖಲೆ ಸಂಖ್ಯೆಯ ಭಕ್ತರು ಆಗಮಿಸಿದ ದಿನವಾಗಿ ರವಿವಾರ ಗುರುತಿಸಿಕೊಂಡಿತು. ದೇವರ ದರ್ಶನ, ಭೋಜನ ಶಾಲೆ ಎಲ್ಲ ಕಡೆಯೂ ಸರದಿ ಸಾಲು ದೊಡ್ಡದಿತ್ತು.

ಇಡೀ ಕ್ಷೇತ್ರದಲ್ಲಿ ಜಾತ್ರೆಯ ವಾತಾ ವರಣವೇ ತುಂಬಿತ್ತು. ಶನಿವಾರ ಸಂಜೆ ಬಳಿಕ ಯಾತ್ರಾರ್ಥಿಗಳು ಕ್ಷೇತ್ರದ ಕಡೆಗೆ ಆಗಮಿಸಿದ್ದರಿಂದ ಕ್ಷೇತ್ರದ ದೇವಸ್ಥಾನ ಹಾಗೂ ಖಾಸಗಿ ವಸತಿಗೃಹಗಳು ಭರ್ತಿ ಯಾಗಿದ್ದವು. ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಮಹಾಪೂಜೆ, ಶೇಷಸೇವೆ, ಪಂಚಾಮೃತ ಅಭಿಷೇಕ, ನಾಗಪ್ರತಿಷ್ಠೆ, ಆಶ್ಲೇಷಾ ಬಲಿ ಮುಂತಾದ ಸೇವೆಗಳನ್ನು ನೆರವೇರಿಸಿದರು. ಬೆಳಗ್ಗೆ ಆರು ಗಂಟೆಯಿಂದಲೇ ಭಕ್ತರು ಸರದಿಯಲ್ಲಿ ನಿಂತು ಈ ಎಲ್ಲ ಸೇವೆ, ಹರಕೆ ಸಲ್ಲಿಸಿದರು. ಗೋಪುರದಿಂದಲೇ ಭಕ್ತರ ಸಾಲು ಗೋಚರಿಸಿತು. ಭೋಜನ ಶಾಲೆಯ ಮುಂದೆ ರಥಬೀದಿಯಿಂದಲೇ ಸರದಿಯಿತ್ತು.

ಆದಿ ಸುಬ್ರಹ್ಮಣ್ಯ ಮತ್ತು ಕುಮಾರಧಾರಾ ಸ್ನಾನಘಟ್ಟದಲ್ಲಿಯೂ ಭಕ್ತ ಸಂದಣಿ ಅತ್ಯಧಿಕವಾಗಿತ್ತು. ಭಕ್ತರೊಂದಿಗೆ ಅವರನ್ನು ಕರೆದುಕೊಂಡು ಬಂದ ವಾಹನಗಳ ಸಂಖ್ಯೆಯೂ ಜಾಸ್ತಿಯಿದ್ದ ಕಾರಣ ಕ್ಷೇತ್ರದ ಪಾರ್ಕಿಂಗ್‌ ಸ್ಥಳಗಳು ಭರ್ತಿಯಾಗಿದ್ದವು. ರಸ್ತೆಗಳೂ ಆಗಾಗ ಬ್ಲಾಕ್‌ ಆಗಿ ಕಿರಿಕಿರಿ ಉಂಟಾಗಿತ್ತು.

LEAVE A REPLY

Please enter your comment!
Please enter your name here