Home ಧಾರ್ಮಿಕ ಸುದ್ದಿ ಕುಕ್ಕಟ್ಟೆ ದೇಗುಲ: ಆಧಾರ ಶಿಲಾ ಪ್ರತಿಷ್ಠೆ, ನಿಧಿಕುಂಭ ಸ್ಥಾಪನೆ

ಕುಕ್ಕಟ್ಟೆ ದೇಗುಲ: ಆಧಾರ ಶಿಲಾ ಪ್ರತಿಷ್ಠೆ, ನಿಧಿಕುಂಭ ಸ್ಥಾಪನೆ

2324
0
SHARE
ಆಧಾರ ಶಿಲಾ ಪ್ರತಿಷ್ಠೆ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಲೋಕೇಶ್‌ ಆಚಾರ್ಯ ಪೂಂಜಾಲಕಟ್ಟೆ ದೀಪ ಬೆಳಗಿಸಿದರು.

ಕಾಣಿಯೂರು: ಊರಿನ ದೇವಸ್ಥಾನಗಳು ಜೀರ್ಣೋ ದ್ಧಾರಗೊಂಡು ಸುಂದರ ದೇವಸ್ಥಾನವಾಗಿ ನಿರ್ಮಾಣಗೊಂಡರೆ ನಮ್ಮ ಜೀವನವೂ ಸುಂದರಗೊಳ್ಳುತ್ತದೆ. ಭಕ್ತರು ಸಮರ್ಪಣ ಭಾವದಿಂದ ತೊಡಗಿಸಿಕೊಂಡಾಗ ಮಾತ್ರ ದೇವಸ್ಥಾನ ಅತೀ ಶೀಘ್ರದಲ್ಲಿ ನಿರ್ಮಾಣ ಗೊಳ್ಳಲು ಸಾಧ್ಯ ಎಂದು ಸುಳ್ಯ ಶಾಸಕ ಎಸ್‌. ಅಂಗಾರ ಹೇಳಿದರು.

ಅವರು ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೇಶವ ತಂತ್ರಿ ಮೂಡುಬಿದಿರೆ ಅವರ ನೇತೃತ್ವದಲ್ಲಿ ವಾಸ್ತುಶಿಲ್ಪಿ ಕೃಷ್ಣ ಆಚಾರ್ಯ ಕುಕ್ಕುಂದೂರು ಕಾರ್ಕಳ ಅವರ ನಿರ್ದೇಶನದಲ್ಲಿ ಆಧಾರ ಶಿಲಾ ಪ್ರತಿಷ್ಠೆ, ನಿಧಿಕುಂಭ ಸ್ಥಾಪನೆ ಹಾಗೂ ಪಾದುಕಾನ್ಯಾಸದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ದೇವಸ್ಥಾನ ಮೂಲ ಸೌಕರ್ಯ ಅಭಿವೃದ್ಧಿಗೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಿಂದ 5 ಲಕ್ಷ ರೂ. ಹಾಗೂ ಧಾರ್ಮಿಕ ದತ್ತಿ ಇಲಾಖೆ ಮೂಲಕ ಹೆಚ್ಚಿನ ಅನುದಾನವನ್ನು ಭರಿಸುವುದಾಗಿ ಶಾಸಕರು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸ್ವರ್ಣೋದ್ಯಮಿ ಧನಂಜಯ ಆಚಾರ್ಯ ಪಾಲ್ಕೆ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಯೋಗ ಸಿಗುವುದೇ ದೊಡ್ಡ ಸೌಭಾಗ್ಯ. ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುತ್ತೇನೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಕಾಳಿಕಾಂಬ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಲೋಕೇಶ್‌ ಆಚಾರ್ಯ ಪೂಂಜಾಲಕಟ್ಟೆ ಮಾತನಾಡಿ, ಎಲ್ಲ ಸಮುದಾಯದ ಕೂಡುವಿಕೆಯೊಂದಿಗೆ ಈ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿರುವುದು ಶ್ಲಾಘನೀಯ. ದೇವಸ್ಥಾನವು ಅತೀ ಶೀಘ್ರದಲ್ಲಿ ನಿರ್ಮಾಣವಾಗಲಿ ಎಂದರು.

ಜಿ.ಪಂ. ಸದಸ್ಯರಾದ ಎಸ್‌.ಎನ್‌. ಮನ್ಮಥ, ಪ್ರಮೀಳಾ ಜನಾರ್ದನ, ಧಾರ್ಮಿಕ ಮುಂದಾಳು ಅರುಣ್‌ ಕುಮಾರ್‌ ಪುತ್ತಿಲ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಆಚಾರ್ಯ ಮರೋಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ ಇಳಂತಿಲ, ಆಡಳಿತ ಸಮಿತಿ ಅಧ್ಯಕ್ಷ ಧನಂಜಯ ಆಚಾರ್ಯ ಏನೆಕಲ್ಲು ಮಾತನಾಡಿದರು.

ಈ.ಎಸ್‌. ಪುರಂದರ ಪುರೋಹಿತ್‌ ಮುನಿಯಾಲ್ ಧಾರ್ಮಿಕ ಉಪನ್ಯಾಸ ನೀಡಿದರು. ಸುಳ್ಯ ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್‌. ರೈ, ಕಟಪಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ದಿನೇಶ್‌ ಆಚಾರ್ಯ ಎರ್ಮಾಳ್‌, ಸುಳ್ಯ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವಿಸ್ತಾರಣಾಧಿಕಾರಿ ಮುರಳೀಧರ ಎರ್ಮಾಯಿಲ್, ವಿಶ್ರಾಂತ ತಹಶೀಲ್ದಾರ್‌ ಎಸ್‌. ರಾಘವೇಂದ್ರ, ಎಣ್ಮೂರು ಗ್ರಾ.ಪಂ. ಅಧ್ಯಕ್ಷೆ ಜಾನಕಿ ಅಲೆಂಗಾರ, ಕಾಪು ವಿಧಾನಸಭಾ ಕ್ಷೇತ್ರದ ವಿಶ್ವಕರ್ಮ ಯುವ ವೇದಿಕೆಯ ಅಧ್ಯಕ್ಷ ವೈ. ಗಣೇಶ್‌ ಆಚಾರ್ಯ ಉಚ್ಚಿಲ, ಮಂಗಳೂರು ಕಾಳಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಜಿತೇಂದ್ರ ಆಚಾರ್ಯ, ನಿಂತಿಕಲ್ಲು ವನದುರ್ಗಾದೇವಿ ಸಾನ್ನಿಧ್ಯದ ಆಡಳಿತ ಮಂಡಳಿ ಅಧ್ಯಕ್ಷ ರೂಪರಾಜ ರೈ ಕೆ., ವಾಸ್ತುಶಿಲ್ಪಿ ಕೃಷ್ಣ ಆಚಾರ್ಯ ಕುಕ್ಕುಂದೂರು ಕಾರ್ಕಳ, ಕಡಬ ಕೆ.ಎಸ್‌. ದಿನೇಶ್‌ ಆಚಾರ್ಯ, ಉಮೇಶ್‌ ಆಚಾರ್ಯ, ಕುಕ್ಕಟೆ ದೇವಸ್ಥಾನದ ಆನುವಂಶಿಕ ಮೊಕ್ಕೇಸರ ಜನಾರ್ದನ ಆಚಾರ್ಯ ಕುಕ್ಕಟೆ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ಕುಕ್ಕಟೆ ಉಪಸ್ಥಿತರಿದ್ದರು.

ಜಿಲ್ಲಾ ವಿಶ್ವಕರ್ಮ ಹಿತರಕ್ಷಣ ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು ಪ್ರಸ್ತಾವನೆಗೈದರು. ಸಮಹಾದಿ ಶ್ರೀ ರಾಮಾಂಜನೇಯ ಭಜನ ಮಂದಿರದ ಸಂಚಾಲಕ ವಸಂತ ನಡುಬೈಲು ಸ್ವಾಗತಿಸಿ, ಪುರೋಹಿತ್‌ ಬಾಲಕೃಷ್ಣ ಆಚಾರ್ಯ ಕುಕ್ಕಟ್ಟೆ ವಂದಿಸಿದರು. ಶಿಕ್ಷಕಿ ರಶ್ಮಿ ಮತ್ತು ಪ್ರದೀಪ್‌ ಎಣ್ಮೂರು ನಿರೂಪಿಸಿದರು.

LEAVE A REPLY

Please enter your comment!
Please enter your name here