Home ಧಾರ್ಮಿಕ ಕಾರ್ಯಕ್ರಮ ಕುಡುಪು: ನೂತನ ಬಂಡಿ ಸಮರ್ಪಣೆ

ಕುಡುಪು: ನೂತನ ಬಂಡಿ ಸಮರ್ಪಣೆ

1397
0
SHARE
ಬಂಡಿ ರಥವನ್ನು ಭಜಕರ ಜಯಘೋಷದೊಂದಿಗೆ ಅರ್ಪಿಸಲಾಯಿತು.

ಮಹಾನಗರ: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧಾನ ಕ್ಷೇತ್ರ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಪ್ರಧಾನ ಆರಾಧ್ಯ ದೈವದೇವರಾದ ಶ್ರೀ ಜಾರಾಂದಾಯ ಬಂಟ ಮತ್ತು ಶ್ರೀ ಧೂಮಾವತಿ ಬಂಟ ಹಾಗೂ ಪಿಲಿಚಾಮುಂಡಿ ದೈವ ದೇವರಿಗೆ ವೃಷಭ ಮಾಷದ ಮೊದಲ ದಿನ ಜರಗುವ ಬೇಶದ ಬಂಡಿ ಉತ್ಸವ ಸಂದರ್ಭ ನೂತನ ಅತೀ ವಿಶಿಷ್ಟವಾದ ಬಂಡಿ ರಥವನ್ನು ಸಹಸ್ರಾರು ಭಕ್ತ ಭಜಕರ ಜಯಘೋಷದೊಂದಿಗೆ ಅರ್ಪಿಸಲಾಯಿತು.

ಪ್ರಧಾನ ಶ್ರೀ ಅನಂತ ಪದ್ಮನಾಭ ದೇವರಿಗೆ ರಾತ್ರಿಯ ಮಹಾಪೂಜೆ ಜರಗಿದ ಬಳಿಕ ಕ್ಷೇತ್ರದ ದೈವದೇವರ ದೈವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಏಕಕಾಲಕ್ಕೆ ನಾಲ್ಕು ದೈವಗಳಾದ ಶ್ರೀ ಜಾರಂದಾಯ, ಬಂಟ ಮತ್ತು ಶ್ರೀ ಧೂಮಾವತಿ ಹಾಗೂ ಬಂಟ ದೈವಗಳಿಗೆ ಗಗ್ಗರ ಸೇವೆ ಜರಗಿತು.

ನೂತನ ಬಂಡಿ ವಾಹನೋತ್ಸವ
ನಾಲ್ಕು ದೈವಗಳಿಗೆ ಅಣಿಕಟ್ಟೆ ವಿಶೇಷ ನೇಮ ಜರಗಿ ಶ್ರೀದೇವರ ಬ್ರಹ್ಮರಥ ಸಾಗುವ ರಾಜಬೀದಿಯಲ್ಲಿ ಶ್ರೀ ಜಾರಾಂದಾಯ ಹಾಗೂ ಬಂಟ ದೈವದೇವರ ನೂತನ ಬಂಡಿ ವಾಹನೋತ್ಸವ ಜರಗಿತು. ಊರಿನ ಜನರಿಂದ ಬಂಡಿ ವಾಹನಕ್ಕೆ ಹುರುಳಿಕಾಯಿ, ತೆಂಗಿನ ಕಾಯಿ ಮತ್ತು ದೈವಕ್ಕೆ ಹಾಲು, ಸಿಂಗಾರ ಹೂ, ಸೀಯಾಳ ನೀಡುವ ಮೂಲಕ ವಿಶೇಷ ಸೇವೆ ಸಲ್ಲಿಸಿದರು.

ಆನುವಂಶಿಕ ಆಡಳಿತ ಮೋಕ್ತೆಸರರಾದ ಕೆ. ನರಸಿಂಹತಂತ್ರಿ, ಕಾರ್ಯ ನಿರ್ವಹಣ ಅಧಿಕಾರಿ ಅರವಿಂದ ಸುತಗುಂಡಿ, ಆನುವಂಶಿಕ ಮೋಕ್ತೆಸರ ಬಾಲಕೃಷ್ಣ, ಕಾರಂತ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಮನೋಹರ ಭಟ್, ಪ್ರಭಾಕರ ಭಟ್, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ, ಮೋಕ್ತೆಸರರಾದ ಭಾಸ್ಕರ್‌.ಕೆ. ಸುಜನ್‌ದಾಸ್‌ ಕುಡುಪು, ಉದಯ ಕುಮಾರ ಕುಡುಪು, ರಾಘವೇಂದ್ರ ಭಟ್, ವಾಸುದೇವರಾವ್‌ ಕುಡುಪು, ರವೀಂದ್ರ ನಾಯಕ್‌ ಕುಡುಪು, ದಿನೇಶ್‌ ಪೆಜತ್ತಾಯ, ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷರಾದ ಕೆ. ಕೃಷ್ಣರಾಜತಂತ್ರಿ, ಅರವಿಂದ ತಂತ್ರಿ, ರವಿಪ್ರಸನ್ನ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here