ಮಹಾನಗರ : ನಗರದ ಕುಡುಪು ಗೃಹ ಮಂಡಳಿಯ ಬಡಾವಣೆಯಲ್ಲಿರುವ ನಿವೇಶನಗಳ ಮಾಲಕರ ಸಂಘದ ವತಿಯಿಂದ ಬಡಾವಣೆಯ ಹಾಗೂ ಆಸುಪಾಸಿನ ಜನರಿಗಾಗಿ ಕ್ರಿಸ್ಮಸ್ ಸೌಹಾರ್ದ ಕೂಟ ನಡೆಯಿತು.
ಅದೇ ಪರಿಸರದಲ್ಲಿರುವ ಪಾಲ್ದನೆ ಸಂತ ತೆರೆಜಾ ಚರ್ಚ್ನ ನಿತ್ಯಾಧರ್ ವಾರ್ಡ್ನ ಸದಸ್ಯರು ಭಾಗವಹಿಸಿದ್ದರು. ಸಂತ ತೆರೆಜಾ ಚರ್ಚ್ನ ಪ್ರಧಾನ ಧರ್ಮ ಗುರು ವಂ| ಆಲ್ಬನ್ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. ಕ್ರಿಸ್ಮಸ್ ಹಬ್ಬವು ಶಾಂತಿ, ಪ್ರೀತಿ ಹಾಗೂ ಬಾಂಧವ್ಯದ ಸಂಕೇತವಾಗಿದೆ.
ಗೋದಲಿಯಲ್ಲಿ ಹುಟ್ಟಿರುವ ಯೇಸು ಕ್ರಿಸ್ತ ಬಡಬಗ್ಗರ ಜೀವನದ ಸಂಕೇತವಾಗಿದ್ದಾರೆ. ಮಾತೆ ಮೇರಿಯ ಮೂಲಕ ಜನಿಸಿದ ಅವರು ಜನರೊಂದಿಗೆ ಬೆರೆತು ಸಮಾಜ ಸೇವೆಯನ್ನು ಮಾಡಿ ಮುಂದೆ ನಮ್ಮ ಪಾಪಗಳನ್ನು ತೊಳೆಯಲು ಮಾನವರಾಗಿ ಎಲ್ಲ ಕಷ್ಟಗಳನ್ನು ಸಹಿಸಿ ದೇವ ರೂಪ ತಾಳಿ ನಮ್ಮನ್ನು ರಕ್ಷಿಸಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಇ. ಫೆರ್ನಾಂಡಿಸ್, ಸಂತ ತೆರೆಜಾ ಚರ್ಚ್ನ ನೂತನ ಉಪಾಧ್ಯಕ್ಷ ವಿಲಿಯಂ ಲೋಬೊ, ಕೆ.ಎಚ್.ಬಿ. ಮಾಲಕರ ಸಂಘದ ಮಾಜಿ ಕಾರ್ಯದರ್ಶಿ ರೀಮಾ ಡಿ’ಸೋಜಾ,. ಕಾರ್ಯದರ್ಶಿ ರವಿ ಪ್ರಸಾದ್ ಅವರು ಉಪಸ್ಥಿತರಿದ್ದರು. ಕೆ.ಎಚ್.ಬಿ. ಮಾಲಕರ ಸಂಘದ ಅಧ್ಯಕ್ಷ ಜನಾರ್ದನ ಬಾಬು ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು.
ಕ್ರಿಸ್ಮಸ್ ಸೌಹಾರ್ದ ಹಬ್ಬದ ಪ್ರಯುಕ್ತ ಸಂಘದ ಸದಸ್ಯರಿಂದ ಮಂಗಳೂರಿನ ಲಿಟ್ಲ
ಸಿಸ್ಟರ್ ಆಫ್ ಪೂ ವರ್, ಕೈಕಂಬದ ಸ್ನೇಹ ಸದನದ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡಿ ಅಲ್ಲಿ ಕ್ರಿಸ್ಮಸ್ ಆಚರಿಸಲಾಯಿತು.