Home ಧಾರ್ಮಿಕ ಕಾರ್ಯಕ್ರಮ ಜೆಪ್ಪು ಕುಡುಪ್ಪಾಡಿ ಶ್ರೀ ವಿಷ್ಣುಮೂರ್ತಿ ಆದಿಕ್ಷೇತ್ರ: ಒತ್ತೆಕೋಲ

ಜೆಪ್ಪು ಕುಡುಪ್ಪಾಡಿ ಶ್ರೀ ವಿಷ್ಣುಮೂರ್ತಿ ಆದಿಕ್ಷೇತ್ರ: ಒತ್ತೆಕೋಲ

1740
0
SHARE
ಶ್ರೀವಿಷ್ಣುಮೂರ್ತಿ ದೈವದ ಒತ್ತೆಕೋಲ (ಕೆಂಡ ಸೇವೆ) ರವಿವಾರ ಮುಂಜಾನೆ ನಡೆಯಿತು.

ಮಂಗಳೂರು: ನಗರದ ಜೆಪ್ಪು ಕುಡುಪ್ಪಾಡಿ ಶ್ರೀವಿಷ್ಣುಮೂರ್ತಿ ಆದಿಕ್ಷೇತ್ರದಲ್ಲಿ ಒತ್ತೆಕೋಲ (ಕೆಂಡ ಸೇವೆ) ರವಿವಾರ ಮುಂಜಾನೆ ನಡೆಯಿತು. ಮಹೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಶನಿವಾರ ರಾತ್ರಿಯಿಂದ ಆರಂಭವಾಯಿತು.

ಶನಿವಾರ ಸಂಜೆ 6ರಿಂದ ಮರುಪುತ್ತೇರಿ, ರಾತ್ರಿ 9ರಿಂದ ಶ್ರೀ ಕಲ್ಲುರ್ಟಿ-ಕಲ್ಕುಡ ದೈವಗಳ ಕೋಲ, ಪ್ರಾತಃಕಾಲ 5ರಿಂದ ಶ್ರೀ ಪಂಜುರ್ಲಿ, ಶ್ರೀ ಗುಳಿಗ ದೈವಗಳ ಕೋಲ ಹಾಗೂ ಪ್ರಸಾದ ವಿತರಣೆ ನಡೆಯಿತು. ಕ್ಷೇತ್ರದ ಆಚಾರಪಟ್ಟವರು, ಗುರಿಕಾರರು, ಸದಸ್ಯರು, ಯುವ ವೇದಿಕೆ, ಮಹಿಳಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here