Home ಧಾರ್ಮಿಕ ಸುದ್ದಿ ಕುದ್ರೋಳಿ: ಶಿಖರ ಪ್ರತಿಷ್ಠೆ,ಚಂಡಿಕಾ ಹೋಮ ಸಂಪನ್ನ

ಕುದ್ರೋಳಿ: ಶಿಖರ ಪ್ರತಿಷ್ಠೆ,ಚಂಡಿಕಾ ಹೋಮ ಸಂಪನ್ನ

1407
0
SHARE

ಮಹಾನಗರ : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಕ್ರವಾರ ಬೆಳಗ್ಗೆ ಸ್ವರ್ಣ ಲೇಪಿತ ಶಿಖರ ಪ್ರತಿಷ್ಠೆ ಮತ್ತು ಚಂಡಿಕಾಹೋಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಸಾವಿರಾರು ಭಕ್ತರು ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾದರು.

ಬೆಳಗ್ಗೆ 5ರಿಂದ ಮಹಾಗಣಪತಿ ಹೋಮ, 8.15ಕ್ಕೆ ಗರ್ಭಗುಡಿಯ ಶಿಖರ ಪ್ರತಿಷ್ಠೆ, ತ್ರಿಕಾಲ ಗುರುಪೂಜೆ, ತ್ರಿಕಾಲ ಅಂಕುರ ಪೂಜೆ, ಚಂಡಿಕಾ ಹೋಮ, ಜಲೋದ್ಧಾರ ಕ್ರಿಯ, ವಾಹನ ಬಿಂಬ ಶುದ್ಧಿ ನಡೆಯಿತು. ಸಂಜೆ 6ರಿಂದ ದೀಪಾರಾಧನಾ, ತತ್ವಕಲಶ ಪೂಜೆ, ತತ್ವಹೋಮ, ಕಲಶಾಭಿಷೇಕ, ಮಹಾಪೂಜೆ ನಡೆಯಿತು.

ಈ ಸಂದರ್ಭ 25 ಅಡಿ ಎತ್ತರದ ಮೇಲ್ಛಾವಣಿ ಏರಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ಅವರು ಅಚ್ಚರಿ ಮೂಡಿಸಿದರು. ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್‌ ಆರ್‌., ಕ್ಷೇತ್ರ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಊರ್ಮಿಳಾ
ರಮೇಶ್‌ ಕುಮಾರ್‌, ಸದಸ್ಯರಾದ ಡಾ| ಬಿ.ಜಿ. ಸುವರ್ಣ, ದೇವೇಂದ್ರ ಪೂಜಾರಿ, ಡಾ|ಅನಸೂಯಾ ಬಿ.ಟಿ. ಸಾಲ್ಯಾನ್‌, ಶೇಖರ್‌ ಪೂಜಾರಿ ಉಪಸ್ಥಿತರಿದ್ದರು.

ಸಂಸದ ನಳಿನ್‌ ಭೇಟಿ ಕುದ್ರೋಳಿ ಕ್ಷೇತ್ರದಲ್ಲಿ ನಡೆ ಯುತ್ತಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಅವರು ಶುಕ್ರವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.

ನಾಳೆ ಬ್ರಹ್ಮಕಲಶೋತ್ಸವ ಫೆ. 17ರಂದು ಬೆಳಗ್ಗೆ 7.35ಕ್ಕೆ ರಾಜಗೋಪುರ ಶಿಖರ ಪ್ರತಿಷ್ಠೆ, ಕಲಶಾಭಿಷೇಕ, ಅವಾಸಂ, ವೀರಕಾಂಡ ಪೀಠ ಪೂಜೆ. ಬೆಳಗ್ಗೆ ಗಂಟೆ 8.05ಕ್ಕೆ ವಾಹನ ಪ್ರತಿಷ್ಠೆ, ಕಲಶಾಭಿಷೇಕ, ಧ್ವಜಾರೋಹಣ.

ಮಧ್ಯಾಹ್ನ ಗಂಟೆ 12.15ಕ್ಕೆ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ವಿಶೇಷ ಪೂಜೆ, ನೈವೇದ್ಯ ಪೂಜೆ, ಪ್ರಸನ್ನಪೂಜೆ, ಮಹಾಮಂಗಳಾರತಿ, ಮಹಾ ಅನ್ನಸಂತರ್ಪಣೆ ನಡೆಯಲಿದೆ.ಫೆ. 16ರಂದು ಸಂಜೆ 6ಗಂಟೆಗೆ ಗುರು ವಿದೂಷಿ ರೂಪರ್ಶಿ ಮಧುಸೂದನ್‌ ಶಿಷ್ಯೆ ವಿದೂಷಿ ಶ್ವೇತಾ ಕೃಷ್ಣ ಅವರಿಂದ ಶಿವ ಸಮರ್ಪಣಾಂ ಭರತನಾಟ್ಯ ನಡೆಯಲಿದೆ. ಸಂಜೆ 7.30ರಿಂದ ಚಕ್ರಪಾಣಿ ನೃತ್ಯಕಲಾ ಕೇಂದ್ರ ಅತ್ತಾವರ ಅವರಿಂದ “ಅಮರ್‌ ಬೊಳ್ಳಿಲು ಕೋಟಿ ಚೆನ್ನಯ್ಯ’ ನೃತ್ಯ ರೂಪಕ ನಡೆಯಲಿದೆ.

LEAVE A REPLY

Please enter your comment!
Please enter your name here