ಉಳ್ಳಾಲ: ಕುದ್ರೋಳಿ ಗೊಕರ್ಣ ನಾಥ ಕ್ಷೇತ್ರದ ನೂತನ ಧ್ವಜಜಸ್ತಂಭ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಉಳ್ಳಾಲ ಕ್ಷೇತ್ರ ವ್ಯಾಪ್ತಿಯ ಬಿಲ್ಲವ ಸಂಘಟನೆಗಳು, ವಿವಿಧ ದೇವಸ್ಥಾನ, ದೈವಸ್ಥಾನ ಸಂಘ ಸಂಸ್ಥೆಗಳ ವತಿಯಿಂದ ನಡೆದ ಹೊರೆಕಾಣಿಕೆ ಮೆರ ವಣಿಗೆಯು ಕೊಲ್ಯ ಶ್ರೀನಾರಾಯಣ ಗುರು ಮಂದಿರದಿಂದ ಹೊರಟಿತು.
ಕೊಲ್ಯದಲ್ಲಿ ಶ್ರೀ ನಾರಾಯಣ ಗುರು ದೇವರಿಗೆ ಪೂಜೆ ನಡೆದು ಪ್ರಾರ್ಥನೆ ಸಲ್ಲಿಸಿದ ಬಳಿಕ ಹೊರೆಕಾಣಿಕೆ ಸಮಿತಿಯ ಗೌರವಾಧ್ಯಕ್ಷ ಕೆ.ಟಿ. ಸುವರ್ಣ ಚಾಲನೆ ನೀಡಿದರು.
ಹೊರೆಕಾಣಿಕೆ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಬಂಗೇರ, ಈಶ್ವರ ಉಳ್ಳಾಲ್, ಎ.ಜೆ. ಶೇಖರ್, ಚಂದ್ರಶೇಖರ್ ಉಚ್ಚಿಲ್, ಸತೀಶ್ ಕುಂಪಲ, ಕೆ.ಪಿ.
ಸುರೇಶ್, ಬಾಬು ಶ್ರೀಶಾಸ್ತ ಕಿನ್ಯ, ಆನಂದ್ ಕೊಂಡಾಣ, ಸುರೇಶ್ ಭಟ್ನಗರ, ಲಕ್ಷ್ಮಣ ಕೋಟ್ಯಾನ್, ಚಂದ್ರಹಾಸ್ ಪೂಜಾರಿ ಅಂಬ್ಲಿಮೊಗರು, ಈಶ್ವರ್ ಕನೀರುತೋಟ
ಗಂಗಾಧರ ಪೂಜಾರಿ ಕೊಣಾಜೆ, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.