Home ಧಾರ್ಮಿಕ ಸುದ್ದಿ ಕುದ್ರೋಳಿ ದೇಗುಲ: ಬ್ರಹ್ಮಕಲಶೋತ್ಸವ

ಕುದ್ರೋಳಿ ದೇಗುಲ: ಬ್ರಹ್ಮಕಲಶೋತ್ಸವ

748
0
SHARE

ಮಹಾನಗರ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ರವಿವಾರ ಭಕ್ತಿ- ಸಂಭ್ರಮದಿಂದ ಸಂಪನ್ನಗೊಂಡಿತು. ಸಾವಿರಾರು ಭಕ್ತ ಸಂದೋಹದ ಸಮ್ಮುಖದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶೋತ್ಸವ ನೆರವೇರಿತು.

900 ತಾಮ್ರದ ಕಳಶ, 108 ಬೆಳ್ಳಿಯ ಕಲಶ, 1 ಬೆಳ್ಳಿಯ ಪ್ರಧಾನ ಕಲಶದಲ್ಲಿ ಶ್ರೀದೇವರಿಗೆ ಅಭಿಷೇಕ ನೆರವೇರಿಸಲಾಯಿತು. ಮಧ್ಯಾಹ್ನ 12.15ಕ್ಕೆ ಬ್ರಹ್ಮಕಲಶಾಭಿಷೇಕ ಆರಂಭವಾಯಿತು.

ಮಹಾಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ದೇವರ ಅನ್ನಪ್ರಸಾದ ಸ್ವೀಕರಿಸಿದರು. ಬ್ರಹ್ಮಕಲಶೋತ್ಸವದ ಅಪೂರ್ವ ಕ್ಷಣವನ್ನು ವೀಕ್ಷಿಸಲು ನೆರವಾಗಲು ದೇವಾಲಯದ ಹೊರಭಾಗದಲ್ಲಿ ಎಲ್‌ಇಡಿ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಸಾವಿರಾರು ಭಕ್ತರು ಬ್ರಹ್ಮಕಲ ಶಾಭಿಷೇಕದ ದೃಶ್ಯವನ್ನು ಇದರ ಮೂಲಕ ವೀಕ್ಷಿಸಿದರು. ‘

67 ಮೆಟಿಲಿನ ಅಟ್ಟಣಿಗೆ ಏರಿದ ಪೂಜಾರಿ
ಗೋಕರ್ಣನಾಥ ದೇವರಿಗೆ ಅಭಿಷೇಕ ಆರಂಭದ ಸಮಯ ದಿಂದ 1.45ರ ಪ್ರಧಾನ ಕಲಶಾಭಿಷೇಕ ಪೂರ್ಣಗೊಳ್ಳುವ ತನಕದ 1.30ರ ತಾಸು ಜನಾರ್ದನ ಪೂಜಾರಿ ಅವರು ನಿಂತುಕೊಂಡೇ ಕಲಶಾಭಿಷೇಕದ ಅಪೂರ್ವ ಕ್ಷಣವನ್ನು ವೀಕ್ಷಿಸಿದರು. ಜತೆಗೆ ನೂತನ ಧ್ವಜಸ್ತಂಭ ವಾಹನ ಪ್ರತಿಷ್ಠೆಗೆ ಜನಾರ್ದನ ಪೂಜಾರಿ ಅವರು 67 ಮೆಟ್ಟಿಲಿನ ಅಟ್ಟಣಿಗೆಯನ್ನು ಏರಿ ಗಮನಸೆಳೆದರು.

ಧಾರ್ಮಿಕ ಕಾರ್ಯಕ್ರಮ
ಬೆಳಗ್ಗೆ ಮಹಾಗಣಪತಿ ಹೋಮ, ಗುರುಪೂಜೆ ನಡೆದು, 7.35ಕ್ಕೆ ರಾಜಗೋಪುರ ಶಿಖರ ಪ್ರತಿಷ್ಠೆ, ಕಲಶಾ ಭಿಷೇಕ, ಅ ವಾಸಂ, ವೀರಕಾಂಡ ಪೀಠ ಪೂಜೆ ನೆರವೇರಿತು. 8.05ಕ್ಕೆ
ವಾಹನಪ್ರತಿಷ್ಠೆ, ನೂತನ ಧ್ವಜಸ್ತಂಭಕ್ಕೆ ಕಲಶಾಭಿಷೇಕನಡೆಯಿತು. ಬಳಿಕ ಧ್ವಜಾರೋಹಣವಾಗಿ ಮಧ್ಯಾಹ್ನ 12.15ಕ್ಕೆ ಬ್ರಹ್ಮಕಲಶಾಭಿಷೇಕ ನೆರವೇರಿತು. ವಿಶೇಷ ಪೂಜೆ, ನೈವೇದ್ಯ ಪೂಜೆ, ಪ್ರಸನ್ನ ಪೂಜೆ, ಮಹಾಮಂಗಳಾರತಿ ನಡೆಯಿತು.

LEAVE A REPLY

Please enter your comment!
Please enter your name here